ರಾಮನಗರ: ಕುರಿ ತೊಳೆಯಲು ಕೆರೆಗಿಳಿದ ವೃದ್ಧ ದಂಪತಿ ನೀರು ಪಾಲಾದ ಘಟನೆ ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಗುಂಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮಣ(71), ಜಯಮ್ಮ(60) ಮೃತಪಟ್ಟ ದಂಪತಿ. ಕುರಿ ತೊಳೆಯಲು ಮಧ್ಯಾಹ್ನ ಗುಂಗರಹಳ್ಳಿ ಕೆರೆಗೆ ತೆರಳಿದ್ದ ದಂಪತಿ ನೀರು ಪಾಲಾಗಿದ್ದಾರೆ. ಮೊದಲಿಗೆ ಲಕ್ಷ್ಮಣ ಕಾಲು ಜಾರಿ ನೀರಿಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಹೋದ ಜಯಮ್ಮ ಕೂಡ ನೀರು ಪಾಲಾಗಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೆರೆಯಲ್ಲಿ ಮುಳುಗಿದ್ದ ಇಬ್ಬರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲುಮಟ್ಟಿತ್ತು. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಪತ್ರೆಗೆ ರವಾನಿಸಲಾಗಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
