ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳವೆಂಬುದನ್ನೂ ಗಮನಿಸದೆ ಯುವ ಜೋಡಿ ಅಶ್ಲೀಲತೆಯ ಕೃತ್ಯಗಳಲ್ಲಿ ತೊಡಗುತ್ತಿರುವುದು ಸಾಮಾನ್ಯವಾಗುತ್ತಿದೆ. ಖಾಸಗಿಯಾಗಿರಬೇಕಾದ ಬದುಕಿನ ಕೆಲವೊಂದು ಕ್ಷಣಗಳು ಸಾರ್ವಜನಿಕವಾಗುತ್ತಿದ್ದು, ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ.
ಕಳೆದ ಕೆಲ ತಿಂಗಳುಗಳಿಂದ ಬೈಕಿನ ಮೇಲೆ, ಕಾರಿನ ಮೇಲೆ ಯುವ ಜೋಡಿ ಮದ್ಯ ಸೇವಿಸುವುದು, ಮುತ್ತಿಕ್ಕಿಕೊಳ್ಳುವುದು ಮೊದಲಾದ ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅಲ್ಲದೆ ಕೆಲದಿನಗಳ ಹಿಂದಷ್ಟೇ ವಿದ್ಯಾರ್ಥಿ – ವಿದ್ಯಾರ್ಥಿನಿ ನೋಯ್ಡಾದ ಕಾಲೇಜು ಕ್ಯಾಂಪಸ್ ನಲ್ಲಿ ಸುದೀರ್ಘ ಚಂಬನದಲ್ಲಿ ತೊಡಗಿದ್ದು, ಇದನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ ಮತ್ತೋರ್ವ ವಿದ್ಯಾರ್ಥಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ.
ಇದೀಗ ಅಂತಹುದೇ ಮತ್ತೊಂದು ಘಟನೆ ನಡೆದಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿಯವರ ನಿವಾಸವಿರುವ ಲಕ್ನೋದ ರಸ್ತೆಯಲ್ಲಿ ರೂಫ್ ಟಾಪ್ ತೆರೆದಿರುವ ಕಾರಿನ ಮೇಲೆ ನಿಂತಿದ್ದ ಜೋಡಿಯೊಂದು ಚುಂಬನದಲ್ಲಿ ತೊಡಗಿದೆ. ಈ ದೃಶ್ಯವನ್ನು ಇವರ ಹಿಂದಿದ್ದ ಮತ್ತೊಂದು ವಾಹನದವರು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ಯುವ ಜೋಡಿಗೆ ತರಾಟೆಗೆ ತೆಗೆದುಕೊಂಡಿದ್ದು, ಪೊಲೀಸರು ಇವರಿಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
https://twitter.com/anujjournalist1/status/1820722317367882059?ref_src=twsrc%5Etfw%7Ctwcamp%5Etweetembed%7Ctwterm%5E1820722317367882059%7Ctwgr%5Ed2f8f430d612aed1bdc70d9c083e240a0175d1b4%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fviralvideocoupleopenlykissontopofmovingcarnearcmsresidenceinlucknow-newsid-n625376624