BREAKING: ಹಣಕ್ಕಾಗಿ ದಂಪತಿ ಕೊಲೆಗೈದ ನಾಲ್ವರಿಗೆ ಜೀವಾವಧಿ ಶಿಕ್ಷೆ

ಕಾರವಾರ: ಹಣಕ್ಕಾಗಿ ದಂಪತಿ ಕೊಲೆ ಮಾಡಿದ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಉತ್ತರ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವತಿಯಿಂದ ತೀರ್ಪು ಪ್ರಕಟಿಸಲಾಗಿದೆ. ನಾರಾಯಣ ನಾಯ್ಕ್, ಸಾವಿತ್ರಿ ನಾಯ್ಕ್ ದಂಪತಿಯ ಕೊಲೆಯಾಗಿತ್ತು.

ಸುಕೇಶ್, ವೆಂಕಟರಾಜ್, ನಾಗರಾಜ್, ಭರತ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬೆಂಗಳೂರಿನ ಜಿಗಣಿ ಮೂಲದ ವೆಂಕಟರಾಜ, ನಾಗರಾಜ್, ಭರತ್ ಅವರು ಹಣಕ್ಕಾಗಿ ಕೊಲೆ ಮಾಡಿದ್ದರು. ತಮ್ಮನ ಮಗ ಸುಕೇಶನಿಂದಲೇ ನಾರಾಯಣ ಹತ್ಯೆಯಾಗಿದ್ದರು.

2 ಲಕ್ಷ ರೂಪಾಯಿ ನಗದು, 160 ಗ್ರಾಂ ಚಿನ್ನಾಭರಣ ಕದ್ದು ಸುಕೇಶ್ ಸಹಚರರು ಪರಾರಿಯಾಗಿದ್ದರು. 2019ರ ಡಿಸೆಂಬರ್ 20ರಂದು ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲೂಕಿನ ಆಂದ್ಲೆ ಗ್ರಾಮದಲ್ಲಿ ಘಟನೆ ನಡೆದಿತ್ತು. ಗ್ರಾಮದಲ್ಲಿ ಘಟನೆ ನಡೆದಿತ್ತು. ನ್ಯಾಯಾಧೀಶರಾದ ಡಿ.ಎಸ್. ವಿಜಯಕುಮಾರ ತೀರ್ಪು ಪ್ರಕಟಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read