ಜೈಪುರ: ರಾಜಸ್ಥಾನದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಜಾರಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮತ್ತು ಅಪ್ರಾಪ್ತೆ ಸಾವು ಕಂಡಿದ್ದಾರೆ.
ಜೈಪುರ ಜಿಲ್ಲೆಯ ಜಾಮ್ವರಮ್‌ಗಢ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಐವರು ಒಂದೇ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಮಿತಿಮೀರಿದ ವೇಗದ ಚಾಲನೆಯಿಂದಾಗಿ ಸಮತೋಲನ ಕಳೆದುಕೊಂಡು ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮತ್ತು ಅವರ ನಾಲ್ಕು ವರ್ಷದ ಸೊಸೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐವರೂ ಒಂದೇ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದಾಗ, ಅದು ಮಿತಿಮೀರಿದ ಚಾಲನೆಯಿಂದಾಗಿ ಸಮತೋಲನ ಕಳೆದುಕೊಂಡು ಗೋಡೆಗೆ ಡಿಕ್ಕಿ ಹೊಡೆದಿದೆ. ಮೃತರನ್ನು ಖ್ವಾರಾನಿಜಿ ಗ್ರಾಮದ ನಿವಾಸಿಗಳಾದ ಮತಾದೀನ್(30), ಅವರ ಪತ್ನಿ ಮನೀಷಾ ದೇವಿ(26) ಮತ್ತು ಅವರ ಸೊಸೆ ಅನುಷ್ಕಾ(4) ಎಂದು ಗುರುತಿಸಲಾಗಿದೆ ಎಂದು ಜಾಮ್ವರಮ್‌ಗಢ ಎಎಸ್‌ಐ ಮಹೇಂದ್ರ ಸಿಂಗ್ ತಿಳಿಸಿದ್ದಾರೆ.