ಸುಂದರವಾಗಿದ್ದ ಪತ್ನಿಯ ಮುಖದಲ್ಲಿ ಗುರುತುಗಳು ಮೂಡಿದ ಬೆನ್ನಿಗೇ ವಿಚ್ಛೇದನ ಕೊಟ್ಟ ಪತ್ನಿ

ನೋಡಲು ಬಹಳ ಚೆನ್ನಾಗಿದ್ದಾಳೆ ಎಂದು ಮದುವೆ ಮಾಡಿಕೊಂಡಿದ್ದ ಮಡದಿಯ ಮುಖದಲ್ಲಿ ವೈದ್ಯಕೀಯ ಕಾರಣಗಳಿಂದ ಗುರುತುಗಳು ಮೂಡಿದ ಕಾರಣ ಆಕೆಗೆ ವಿಚ್ಛೇದನ ನೀಡಿದ ವ್ಯಕ್ತಿಯೊಬ್ಬ ಸುದ್ದಿಯಲ್ಲಿದ್ದಾನೆ.

ತಮ್ಮ ಗೆಳತಿಗೆ ಆದ ಅನುಭವವನ್ನು ಸಿಎ ಶುಭಂ ಅಗರ್ವಾಲ್ ಹೆಸರಿನ ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಸಿರಿವಂತ ಗಂಡನ ಕೈ ಹಿಡಿದ ತನ್ನ ಗೆಳತಿ ಆರಂಭದ ದಿನಗಳಲ್ಲಿ ಭಾರೀ ಖುಷಿಯಿಂದ ಇದ್ದು, ಎಲ್ಲವೂ ಚೆನ್ನಾಗಿ ಸಾಗುತ್ತಿದೆ ಎಂದು ತನ್ನಲ್ಲಿ ಹೇಳಿಕೊಂಡಿದ್ದಾಗಿ ಶುಭಂ ತಿಳಿಸಿದ್ದಾರೆ.

ಆದರೆ ಕಳೆದ ಮೂರು ತಿಂಗಳಿನಿಂದ ಆಕೆಯ ಮುಖದ ಮೇಲೆ ಗುರುತುಗಳು ಮೂಡಿದ್ದು ಅವು ಶಾಶ್ವತವಾಗಿ ಉಳಿಯುತ್ತವೆ ಎಂದು ವೈದ್ಯರು ತಿಳಿಸಿದ ಬಳಿಕ ಇಬ್ಬರಲ್ಲೂ ವೈಮನಸ್ಯ ಮೂಡಿದೆ. ಪತಿ – ಪತ್ನಿಯರ ನಡುವೆ ಸದಾ ಜಗಳಗಳು ನಡೆಯಲಾರಂಭಿಸಿ ಇಬ್ಬರ ನಡುವೆ ನೇರ ಮಾತುಕತೆ ನಿಂತು ಹೋಗಿತ್ತು. ತನ್ನ ಪತಿ ಅನ್ಯ ಸ್ತ್ರೀಯರೊಂದಿಗೆ ಮಲಗುತ್ತಿದ್ದಾನೆ ಎಂದು ಕಂಡುಕೊಂಡ ಮಹಿಳೆ ಕೊನೆಗೆ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read