ಕಾಫಿ ತೋಟದಲ್ಲಿ ಘೋರ ಕೃತ್ಯ: ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿಯ ಹತ್ಯೆ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ ಸಮೀಪ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿಯನ್ನು ಹತ್ಯೆ ಮಾಡಲಾಗಿದೆ.

ತೋಟದ ರೈಟರ್ ಈ ಕುರಿತಾಗಿ ದೂರು ನೀಡಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹರದಗೆರೆ ಗ್ರಾಮದ ಬಸಪ್ಪ(55), ಲಲಿತಮ್ಮ(49) ಮೃತಪಟ್ಟ ದಂಪತಿ. 25 ವರ್ಷಗಳಿಂದ ಇಬ್ಬರು ಅನ್ನಪೂರ್ಣೇಶ್ವರಿ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಕಾರ್ಮಿಕರಿಗೆ ನಿರ್ಮಿಸಲಾದ ಲೈನ್ ಮನೆಯಲ್ಲಿ ವಾಸವಾಗಿದ್ದರು.

ಅದೇ ಮನೆಯಲ್ಲಿ ಇಬ್ಬರ ಮೃತದೇಹ ಕಂಡುಬಂದಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಲ್ಲಂದೂರು ಠಾಣೆಗೆ ಎಸ್ಟೇಟ್ ನ ರೈಟರ್ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಂಪತಿ ಇಬ್ಬರೇ ಇದ್ದ ಮನೆಗೆ ಸಂಬಂಧಿಕ ನಿಶಾಂತ್ ಬಂದು ಉಳಿದುಕೊಂಡಿದ್ದ. ಬೆಳಗ್ಗೆ ದಂಪತಿಯ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ನಂತರದಲ್ಲಿ ನಿಶಾಂತ್ ನಾಪತ್ತೆಯಾಗಿದ್ದು, ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ದೂರು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read