ಮತ್ತೆ ಕೊರೋನಾ ಭಾರಿ ಹೆಚ್ಚಳ: ಮುಂದಿನ 20 ದಿನಗಳಲ್ಲಿ ಕೋವಿಡ್ ಉತ್ತುಂಗಕ್ಕೆ; 4 ಅಲೆ ಅಸಂಭವ ಎಂದ ತಜ್ಞರು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಭಾರಿ ಹೆಚ್ಚಾಗಿದ್ದು, 7 ತಿಂಗಳಲ್ಲೇ ಅತ್ಯಧಿಕ 6,050 ಕೇಸ್ ಗಳು ದಾಖಲಾಗಿವೆ. ಇನ್ನೂ 15 ರಿಂದ 20 ದಿನದಲ್ಲಿ ದೇಶದಲ್ಲಿ ಕೋವಿಡ್ ತುತ್ತ ತುದಿಗೇರಲಿದೆ. ಶೀಘ್ರವೇ ಸೋಂಕು ಭಾರಿ ಹೆಚ್ಚಳವಾದರೂ ನಾಲ್ಕನೇ ಅಲೆ ಉಂಟಾಗುವ ಭಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಬಹುತೇಕ ಎಂಡಮಿಕ್ ಹಂತ ತಲುಪಿದ ಕೊರೋನಾ ಲಕ್ಷಣಗಳು ಸೌಮ್ಯವಾಗಿವೆ. ಕೆಮ್ಮು, ನೆಗಡಿಗೆ ಮಾತ್ರ ಸೀಮಿತವಾಗಿದೆ. ಮುನ್ನೆಚ್ಚರಿಕೆ ಕೈಗೊಂಡರೆ ಸಾಕು ಎಂದು ತಜ್ಞರು ಹೇಳಿದ್ದಾರೆ. ದೇಶದಲ್ಲಿಗ ದಿನ ನಿತ್ಯ 6 ಸಾವಿರಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿದ್ದು, ಇನ್ನೂ 15 ರಿಂದ 20 ದಿನದಲ್ಲಿ ಕೋವಿಡ್ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಕೋವಿಡ್ ನಿರ್ವಹಣಾ ವ್ಯವಸ್ಥೆ ಸುಧಾರಿಸುವಂತೆ, ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read