SHOCKING : ಕರ್ನಾಟಕಕ್ಕೆ ಸದ್ದಿಲ್ಲದೇ ಎಂಟ್ರಿ ಕೊಟ್ಟ ಕೊರೊನಾ : ಮೇ ತಿಂಗಳಲ್ಲಿ ಒಟ್ಟು 33 ಕೇಸ್ ದಾಖಲು |Covid-19

ಬೆಂಗಳೂರು : ಕರ್ನಾಟಕದಲ್ಲಿ ಮತ್ತೆ ಕೊರೊನಾ ಆತಂಕ ಮನೆ ಮಾಡಿದ್ದು, ಮೇ ತಿಂಗಳಿನಲ್ಲಿ ಒಟ್ಟು 33 ಕೇಸ್ ದಾಖಲಾಗಿದೆ.

ಹೌದು. ವಿದೇಶಗಳಲ್ಲಿ ಕೊರೊನಾ ಸೋಂಕು ಅಬ್ಬರಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಇದೀಗ ರಾಜ್ಯದಲ್ಲೂ ಕೊರೊನಾ ಸೋಂಕು ಹೆಚ್ಚಳವಾಗುವ ಸಾಧ್ಯತೆಯಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ 9 ತಿಂಗಳ ಮಗುವಿಗೆ ಕೊರೊನಾ ಸೋಂಕು ಧೃಡವಾಗಿದ್ದು, ವಾಣು ವಿಲಾಸ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಸದ್ಯ 16 ಸಕ್ರಿಯ ಪ್ರಕರಣಗಳಿದೆ. ರಾಜ್ಯದಲ್ಲಿ ಒಟ್ಟು 33 ಕೇಸ್ ದಾಖಲಾಗಿದೆ. ಭಾರತದಲ್ಲಿ ಸಕ್ರಿಯ ಕೋವಿಡ್ ಕೇಸ್ ಗಳ ಸಂಖ್ಯೆ 257 ಆಗಿದೆ.

ಕೊರೊನಾ ಈ ಹೆಸರು ಕೇಳಿದರೆ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಹೌದು, ಅಷ್ಟರ ಮಟ್ಟಿಗೆ ಈ ಕೊರೊನಾ ವೈರಸ್ ಜನರನ್ನು ಹಿಂಡಿ ಹಿಪ್ಪೆ ಮಾಡಿತ್ತು. ಇದೀಗ ಹೊಸ ಅವತಾರದಲ್ಲಿ ಮತ್ತೆ ಕ್ರೂರಿ ಕೊರೊನಾ ಕಾಲಿಟ್ಟಿದ್ದು, ಸಿಂಗಾಪುರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ವಿನಾಶಕಾರಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಜಗತ್ತು ಬಳಲಿದ ವರ್ಷಗಳ ನಂತರ, ವಿಶೇಷವಾಗಿ ಏಷ್ಯಾದ ಕೆಲವು ಭಾಗಗಳಲ್ಲಿ ವೈರಸ್ ಮತ್ತೆ ಉಲ್ಬಣಗೊಳ್ಳುತ್ತಿರುವಂತೆ ಕಾಣುತ್ತಿದೆ. ವರದಿಯ ಪ್ರಕಾರ, ಹಾಂಗ್ ಕಾಂಗ್ ಮತ್ತು ಸಿಂಗಾಪುರದ ಆರೋಗ್ಯ ಅಧಿಕಾರಿಗಳು ಎರಡೂ ಪ್ರದೇಶಗಳಲ್ಲಿ ಕೊರೊನಾವೈರಸ್ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read