ಕೊತ್ತಂಬರಿ ಸೊಪ್ಪು ಈ ಆರೋಗ್ಯ ಸಮಸ್ಯೆಗಳಿಗೆ ನೀಡುತ್ತೆ ಪರಿಹಾರ

ಕೊತ್ತಂಬರಿ ಸೊಪ್ಪನ್ನು ಅಡುಗೆಗೆ ಬಳಸಿದರೆ ಆಗ ನಮ್ಮ ಅಡುಗೆ ಕೆಲಸ ಪೂರ್ತಿಯಾದಂತೆ. ಇದನ್ನು ಸಿದ್ಧವಾದ ತಿನಿಸಿನ ಅಲಂಕಾರಕ್ಕಾಗಿ ಉಪಯೋಗಿಸುವುದು ನಮಗೆ ಗೊತ್ತಿದೆ.

ಆದರೆ ಈ ಸೊಪ್ಪನ್ನು ಕೇವಲ ರುಚಿ ಹಾಗೂ ಸುವಾಸನೆಗೆ ಮಾತ್ರ ಬಳಕೆ ಮಾಡುವುದಿಲ್ಲ. ಕೊತ್ತಂಬರಿ ಸೊಪ್ಪು ಆರೋಗ್ಯ ಸಮಸ್ಯೆಗಳಿಗೆ ಹೇಗೆ ಪರಿಹಾರ ನೀಡುತ್ತದೆ ಎಂಬುದನ್ನು ತಿಳಿಯೋಣ.

* ಕೊತ್ತಂಬರಿಯಲ್ಲಿ ವಿಟಮಿನ್ ಎ ಹೇರಳವಾಗಿರುವುದರಿಂದ ಕಣ್ಣಿನ ದೃಷ್ಟಿಯನ್ನು ಸುಸ್ಥಿರವಾಗಿಡುತ್ತದೆ.

* ಇದರಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ಸೇರಿದಂತೆ ಅನೇಕ ಜೀವಸತ್ವಗಳ ಆಗರವೇ ಇದೆ. ಇವೆಲ್ಲವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಸಿ ಜೀವಸತ್ವ ಸಹ ಕೊತ್ತಂಬರಿ ಸೊಪ್ಪಿನಲ್ಲಿ ಪುಷ್ಕಳವಾಗಿರುವುದರಿಂದ ಆಂಟಿ ಆಕ್ಸಿಡೆಂಟಾಗಿ ಕಾರ್ಯನಿರ್ವಹಿಸಿ ಹಲವು ಬಗೆಯ ರೋಗಗಳನ್ನು ತಡೆಗಟ್ಟುತ್ತದೆ.

* ವಿಟಮಿನ್ ಇ ಪ್ರಮಾಣವು ಹೆಚ್ಚಾಗಿರುವುದರಿಂದ ತ್ವಚೆಯಲ್ಲಿ ಹೊಳಪು ಹೆಚ್ಚಿಸಿ, ಚರ್ಮದಲ್ಲಿ ಸುಕ್ಕು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

* ಕೊತ್ತಂಬರಿಯಲ್ಲಿ ಕಬ್ಬಿಣದಂಶ ಹೇರಳವಾಗಿರುತ್ತದೆ. ರಕ್ತಹೀನತೆಯಿಂದ ಬಳಲುವವರು ಕೊತ್ತಂಬರಿ ಸೊಪ್ಪನ್ನು ಬಳಕೆ ಮಾಡಿದರೆ ಅನಿಮಿಯವನ್ನು ದೂರ ಮಾಡಿಕೊಳ್ಳಬಹುದು.

* ಇದರಲ್ಲಿರುವ ಪೊಟಾಷಿಯಂ ರಕ್ತದೊತ್ತಡವನ್ನು ನಿವಾರಿಸುತ್ತದೆ. ಜೊತೆಗೆ ಹೃದಯ ಸಂಬಂಧಿತ ಕಾಯಿಲೆಗಳು, ಮೂತ್ರಪಿಂಡಗಳ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುತ್ತದೆ.

* ಕೊತ್ತಂಬರಿಯಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೆಚ್ಚು. ಜೊತೆಗೆ ಮೆಗ್ನಿಷಿಯಂ, ಜಿಂಕ್ ಹೇರಳವಾಗಿರುವುದರಿಂದ ತ್ವಚೆ ಇನ್ನಷ್ಟು ಹೊಳೆಯಲು ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read