ತೂಕ ಕಡಿಮೆ ಮಾಡ್ತಾ ಸಕ್ಕರೆ ಕಾಯಿಲೆ ನಿಯಂತ್ರಣ ಮಾಡಿ

ತೂಕ ಇಳಿಸಿಕೊಳ್ಳಲು ಅನೇಕ ಮೆಡಿಸಿನ್ ಗಳನ್ನು ಬಳಸಲಾಗುತ್ತದೆ. ಆದರೆ ಇವುಗಳಿಂದಾಗಿ  ಅನೇಕ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಆದ್ದರಿಂದ ತೂಕವನ್ನು ಇಳಿಸಿಕೊಳ್ಳುವಾಗ ಯಾವಾಗಲೂ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು. ತೂಕ ಇಳಿಸಿಕೊಳ್ಳಲು ವಿಶೇಷ ಡಯಟ್ ಬಗ್ಗೆ ಮಾಹಿತಿ ಇಲ್ಲಿದೆ.

ಗೊಲೊ ಡಯಟ್  ಇನ್ಸುಲಿನ್ ಮತ್ತು ರಕ್ತ ಪರಿಚಲನೆಯನ್ನು ಉತ್ತಮವಾಗಿರಿಸುತ್ತದೆ. ಇದರಿಂದ ನಿಮ್ಮ ಹಸಿವು, ತೂಕ ಮತ್ತು ಚಯಾಪಚಯ ಕ್ರಿಯೆಗಳು ಸರಿಯಾಗಿ ನಿರ್ವಹಿಸುತ್ತದೆ. ಜೀವಕೋಶಗಳಿಗೆ ಶಕ್ತಿಯನ್ನು ನೀಡಲು ಇನ್ಸುಲಿನ್ ಕಾರ್ಯನಿರ್ವಹಿಸದಿದ್ದಾಗ, ಸಕ್ಕರೆ  ರಕ್ತದಲ್ಲಿಯೇ  ಉಳಿಯುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುತ್ತದೆ.

ಪ್ರೋಟೀನ್, ಕೊಬ್ಬಿನಂಶದ ಆಹಾರ ಮತ್ತು ತರಕಾರಿಗಳನ್ನು ಸೇರಿಸಬೇಕು. ಪ್ಯಾಕೆಟ್ ಆಹಾರ, ಸಕ್ಕರೆ, ಇತರ ಸಿಹಿ ವಸ್ತುಗಳು, ಸಂಸ್ಕರಿಸಿದ ಆಹಾರವನ್ನು ಸೇವಿಸಬಾರದು. ಕೋಳಿ ಮಾಂಸ, ಸಮುದ್ರ ಆಹಾರ,  ಬೀಜಗಳು,  ಮೊಟ್ಟೆ ಮತ್ತು ಸುಲಭವಾಗಿ ಲಭ್ಯವಿರುವ ಹಸಿರು ತರಕಾರಿಗಳನ್ನು ಸೇರಿಸಿ. ಪ್ರತಿದಿನ ಆಲೂಗಡ್ಡೆ, ಸೊಪ್ಪು ಮತ್ತು ಹಣ್ಣುಗಳನ್ನು  ಡಯಟ್ ನಲ್ಲಿ ಬಳಸಬಹುದು.

ಬೆಳಗಿನ ಉಪಾಹಾರಕ್ಕೆ ಎರಡು ಮೊಟ್ಟೆಗಳು , ಒಂದು ಟೋಸ್ಟ್ , ಬೆಣ್ಣೆ  ಮತ್ತು ಒಂದು ಮೂಸಂಬಿ ಹಣ್ಣು ತಿನ್ನಿ. ಈ ರೀತಿ ಆಹಾರ ಸೇವನೆ ಮಾಡುವುದರಿಂದ ತೂಕ ಕಡಿಮೆ ಮಾಡುವ ಜೊತೆಗೆ  ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read