ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಹಾಡಹಗಲೇ ಸಿನಿಮಾ ಸ್ಟೈಲಿನಲ್ಲಿ ಗುತ್ತಿಗೆದಾರನ ಅಪಹರಣವಾಗಿದ್ದು, ಸಿಸಿಟಿವಿ ದೃಶ್ಯಾವಳಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗುತ್ತಿಗೆದಾರ ಮೋಹನ್ ಚೌಹಾಣ್ ನನ್ನು ದುಷ್ಕರ್ಮಿಗಳು ಹಾಡಹಗಲೇ ಜನರ ಎದುರೇ ಕಿಡ್ನ್ಯಾಪ್ ಮಾಡಿದ್ದು, ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.
ಕಿಡ್ನ್ಯಾಪ್ ಮಾಡೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ಮಧ್ಯಾಹ್ನ 12 :30 ರ ವೇಳೆಗೆ ಅಪಹರಣ ನಡೆದಿದೆ. ಈ ಸಂಬಂಧ ಗೋಕುಲರೋಡ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಗುತ್ತಿಗೆ ವಿಚಾರಕ್ಕೆ ಮೋಹನ್ ಹಾಗೂ ಬಸಪ್ಪ ಎಂಬುವವರ ನಡುವೆ ಗಲಾಟೆ ನಡೆದಿದೆ. ಈ ವಿಚಾರಕ್ಕೆ ಬಸಪ್ಪ & ಗ್ಯಾಂಗ್ ಕಿಡ್ನ್ಯಾಪ್ ಮಾಡಿಬಹುದೆಂಬ ಶಂಕೆ ವ್ಯಕ್ತವಾಗಿದೆ.