BIG NEWS : ನಿರಂತರ ಬೆಲೆ ಏರಿಕೆ : ಪ್ರಧಾನಿ ಮೋದಿ ವಿರುದ್ಧ CM ಸಿದ್ದರಾಮಯ್ಯ ವಾಗ್ಧಾಳಿ.!

ಹುಬ್ಬಳ್ಳಿ : ನಿರಂತರ ಬೆಲೆ ಏರಿಕೆ ಮೂಲಕ ಬಡವರ, ಮಧ್ಯಮ ವರ್ಗದ ದ್ವೇಷಿ ಆಗಿರುವ ನರೇಂದ್ರ ಮೋದಿ ಅವರ ಸರ್ಕಾರ, ಜಾತಿಗಳ ನಡುವೆ, ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚಿ ತನ್ನ ವೈಫಲ್ಯ ಮುಚ್ಚಿಕೊಳ್ಳುತ್ತಿದೆ ಎಂದು ಹುಬ್ಬಳ್ಳಿಯಲ್ಲಿ ನಡೆದ ಜನತಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಅಕ್ಕಿಯಿಂದ ಚಿನ್ನದವರೆಗೂ ಎಲ್ಲದರ ಬೆಲೆ ಆಕಾಶಕ್ಕೆ ಏರಿದೆ. ದೇಶದ, ರಾಜ್ಯದ ಜನರಿಗೆ ಬಿಜೆಪಿ ಪರಿವಾರದ ಈ ಜನದ್ರೋಹ ಅರ್ಥವಾಗಿದೆ. ಇದನ್ನು ಮರೆ ಮಾಚಲು ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಷಡ್ಯಂತ್ರ ನಡೆಸುತ್ತಿದ್ದಾರೆ.

ಉಪ್ಪು, ಸಕ್ಕರೆ, ಟೀ, ಕಾಫಿ, ಅಕ್ಕಿ, ಬೇಳೆ, ಎಣ್ಣೆ, ಕಾಳು, ಚಿನ್ನ, ಬೆಳ್ಳಿ, ರಸಗೊಬ್ಬರ, ಔಷಧ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸೇರಿ ಎಲ್ಲದರ ಬೆಲೆ ಆಕಾಶಕ್ಕೆ ಏರಿಸಿರುವ ಮೋದಿಯವರು ಯಾವುದನ್ನು ತಾನೆ ಬಿಟ್ಟಿದ್ದಾರೆ?

ಡಾಲರ್ ಬೆಲೆ 2014 ರಲ್ಲಿ 59 ರೂಪಾಯಿ ಇತ್ತು. ಇವತ್ತು 86 ರೂಪಾಯಿ ಆಗಿದೆ. ಇದಕ್ಕೆ ಯಾರು ಕಾರಣರು ಮೋದಿಯವರೇ? ಇದೇನಾ ನಿಮ್ಮ ಅಚ್ಛೆ ದಿನ್?

50 ಕೆಜಿ ಸಿಮೆಂಟ್ ಬೆಲೆ 2014 ರಲ್ಲಿ 200 ಇದ್ದದ್ದು ಈಗ 450 ರೂ ಆಗಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 425 ಇದ್ದದ್ದು ಇಂದು 850 ದಾಟಿದೆ. ಶೇ100 ರಷ್ಟು ಬೆಲೆ ಏರಿಕೆ ಮಾಡಿದ್ದೀರಿ. ಜನದ್ರೋಹದ ಪರಮಾವಧಿ ಮುಂದುವರೆಸಿ, ಸಿಲಿಂಡರ್ ಸಬ್ಸಿಡಿ ತೆಗೆದು ಹಾಕಿ ಬಡವರ ಮತ್ತು ಮಧ್ಯಮ ವರ್ಗದವರ ವಿರೋಧಿ ಆಗಿದ್ದೀರಿ. ನಿಮ್ಮ ವಂಚನೆಗೆ ಕೊನೆಯೇ ಇಲ್ಲವೇ?Pralhad Joshi ಅವರೇ ನೀವು ಮತ್ತು ಮೋದಿಯವರು ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಲೇ ಇದ್ದೀರಿ. ಆದರೆ, ನೀವು ಮಾಡಿದ ಪಾಪದ ಕೊಡವನ್ನು ನಮ್ಮ ತಲೆ ಮೇಲೆ ಹೊರಿಸಲು ಯತ್ನಿಸುತ್ತಿದ್ದೀರಿ.‌ ನಿಮಗೆ ನಾಚಿಕೆ ಆಗುವುದಿಲ್ಲವೇ?

ರಾಜ್ಯ ಸರ್ಕಾರ ಹಾಲಿನ ದರ 4ರೂ ಹೆಚ್ಚಿಸಿ ಅಷ್ಟೂ ಹಣವನ್ನೂ ರೈತರಿಗೆ ವರ್ಗಾಯಿಸಿದೆ. ಇದರಲ್ಲಿ ಹತ್ತು ಪೈಸೆ ಕೂಡ ಸರ್ಕಾರಕ್ಕೆ ಬರುವುದಿಲ್ಲ. ಆದರೆ, ನೀವು ಹೆಚ್ಚಿಸಿದ ಬೆಲೆ ಏರಿಕೆ ಯಾವ ಭಾರತೀಯರಿಗೆ ಸಿಗುತ್ತಿದೆ ಹೇಳಿ?
ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಅಸಮಾನತೆ, ತಾರತಮ್ಯ ಹೋಗಿಲ್ಲ. ಆದ್ದರಿಂದ ನಾವು ನಮ್ಮ ಪ್ರಣಾಳಿಕೆಯಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಭರವಸೆ ಕೊಟ್ಟಿದ್ದೆವು. ನಾವು ಮಾಡಿದ ಘೋಷಣೆಯಂತೆ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ರಾಹುಲ್ ಗಾಂಧಿಯವರು ಪಾರ್ಲಿಮೆಂಟಿನಲ್ಲಿ ನಿರಂತರ ಧ್ವನಿ ಎತ್ತಿ ಹೋರಾಟ ನಡೆಸಿದ್ದರು. ಇದರ ಪರಿಣಾಮ ಕೇಂದ್ರ Bharatiya Janata Party (BJP) ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು ಈಗ ಜಾತಿ ಗಣತಿಗೆ ನಿರ್ಧರಿಸಿದೆ. ಇದು Rahul Gandhi ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸೈದ್ಧಾಂತಿಕ ಬದ್ಧತೆಗೆ ಸಿಕ್ಕ ಗೆಲುವು ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read