ಮಂಗಳೂರು: ರಕ್ಷಕನಾಗಿದ್ದ ಬೇಕಿದ್ದ ಪೊಲೀಸಪ್ಪನೇ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಓರ್ವರನ್ನು ಮಂಗಳೂರಿನ ಕಂಕನಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾವೂರು ಪೊಲೀಸ್ ಠಾಣೆ ಕಾನ್ಸ್ ಟೇಬಲ್ ಚಂದ್ರನಾಯಕ್ ಬಂಧಿತ ಆರೋಪಿ. ಇದೇ ಪ್ರಕರಣದಲ್ಲ್ಲಿ ಪತ್ನಿಯ ಖಾಸಗಿ ವಿಡಿಯೋ ಸೆರೆಹಿಡಿದು ಬ್ಲ್ಯಾಕ್ ಮೇಲ್ ಮಾಡಿದ್ದ ಮಹಿಳೆಯ ಪತಿ ಕೂಡ ಅರೆಸ್ಟ್ ಆಗಿದ್ದಾನೆ.
ಮದುವೆ ಬಳಿಕ ಪತಿ ಮಹಾಶಯ ಪತ್ನಿಯ ಹಾಸಗಿ ವಿಡಿಯೋವನ್ನು ಇಟ್ಟುಕೊಂಡು ಪತ್ನಿಗೆ ಹೆದರಿಸಿ, ತಾನು ಹೇಳಿದವರ ಜೊತೆ ಮಲಗುವಂತೆ ಒತ್ತಾಯಿಸುತ್ತಿದ್ದ. ಅಲ್ಲದೇ ವಿಡಿಯೋ ಇಟ್ತುಕೊಂಡು ಬೇರೆ ಬೇರೆಯವರ ಜೊತೆ ಮಲಗವಂತೆ ಹಿಂಸಿಸುತ್ತಿದ್ದ. ಇದರಿಂದ ನೊಂದಿದ ಮಹಿಳೆ ಕಾವೂರು ಪೊಲೀಸರಿಗೆ ದೂರು ನೀಡಿದ್ದಳು. ಕಾನ್ಸ್ ಟೇಬಲ್ ಚಂದ್ರನಾಯಕ್ ಗೆ ತನ್ನ ಪತಿ ಬಳಿ ಇರುವ ವಿಡಿಯೋಗಳನ್ನು ಡಿಲಿಟ್ ಮಾಡಿಸುವಂತೆ ಹಾಗೂ ಗಂಡನಿಗೆ ಬುದ್ಧಿ ಹೇಳುವಂತೆ ಮನವಿ ಮಾಡಿದ್ದರು. ಚಂದ್ರನಾಯಕ್ ತನ್ನ ಪೊಲೀಸ್ ಪವರ್ ಬಳಸಿ ಮಹಿಳೆ ಪತಿಯಿಂದ ಮೊಬೈಲ್ ಪಡೆದು ವಿಡಿಯೋ ಡಿಲಿಟ್ ಮಾಡಿಸಿದ್ದ. ಬಳಿಕ ಪತಿ-ಪತ್ನಿ ನಡುವೆ ರಾಜಿಯನ್ನು ಮಾಡಿಸಿದ್ದ. ಹೀಗೆ ಮಹಿಳೆಯ ಪತಿ ಜೊತೆ ಸಲುಗೆ ಬೆಳೆಸಿಕೊಂಡ ಕಾನ್ಸ್ ಟೇಬಲ್, ಆಕೆಯ ಪತಿಯ ಸಹಾಯದಿಂದಲೇ ಮಹಿಳೆಯ ಮೇಲೆ ದೌರ್ಜನ್ಯವನ್ನೂ ನಡೆಸಿದ್ದ.
ಮಹಿಳೆಯ ಪತಿ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದ. ಕಾನ್ಸ್ಟೇಬಲ್ ಪದೇ ಪದೇ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದು. ಪತಿಯೇ ಕೃತ್ಯಕ್ಕೆ ಬೆಂಬಲ ನೀಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಕಂಕನಾಡಿ ಪೊಲೀಸರು, ಕಮಿಷನರ್ ಸೂಚನೆ ಮೇರೆಗೆ ಕಾಮುಕ ಪತಿ, ಕಾನ್ಸ್ ಟೇಬಲ್ ಇಬ್ಬರನ್ನು ಬಂಧಿಸಿದ್ದಾರೆ.