ಈ ಹೊಗೆಯನ್ನು ಸೇವಿಸುವುದರಿಂದ ಕಡಿಮೆಯಾಗುವುದು ಗಂಟಲು ನೋವು

 

ಗಂಟಲು ನೋವು, ಶೀತ, ಕಫಕ್ಕೆ ಹಾಲಿನ ಜೊತೆಗೆ ಅರಶಿನ ಮಿಕ್ಸ್ ಮಾಡಿ ಸೇವಿಸಲು ಹೇಳುತ್ತಾರೆ. ಇದು ಉತ್ತಮ ಮನೆಮದ್ದೇ. ಆದರೆ ಅದೇರೀತಿ ಅರಶಿನದ ಹೊಗೆ ಸೇವಿಸುವುದರಿಂದಲೂ ಕೂಡ ಶೀತ, ಗಂಟಲು ನೋವನ್ನು ನಿವಾರಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಅರಶಿನದ ಕೊಂಬನ್ನು ತೆಗೆದುಕೊಂಡು ಅದರ ಅರ್ಧದಷ್ಟು ಭಾಗವನ್ನು ಹರಳೆಣ್ಣೆಯಲ್ಲಿ 10-15 ನಿಮಿಷಗಳ ಕಾಲ ಮುಳುಗಿಸಿ. ಬಳಿಕ ಆಯಿಲ್ ಇರುವ ತುದಿಯನ್ನು ಬೆಂಕಿಯಿಂದ ಸುಟ್ಟು ಬಳಿಕ ಬೆಂಕಿಯನ್ನು ಆರಿಸಿ. ಆಗ ಹೊಗೆ ಬರುತ್ತದೆ. ಇದನ್ನು ಇನ್ಹೇಲರ್ ಆಗಿ ಬಳಸಬಹುದು. ಈ ಅರಶಿನ ಹೊಗೆ ಮುಚ್ಚಿದ ಮೂಗನ್ನು ತೆರೆಯುತ್ತದೆ.‌ ಇದು ಸೈನಸ್ ಗಳಿಂದ ಉಂಟಾಗುವ ತಲೆನೋವನ್ನು ಗುಣಪಡಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read