ಇದನ್ನು ಅತಿಯಾಗಿ ಸೇವಿಸಿದ್ರೆ ಹೆಚ್ಚಾಗುತ್ತೆ ಹೈಪರ್ ಥೈರಾಯ್ಡಿಸಮ್‌ ಸಮಸ್ಯೆ

ಉಪ್ಪು ನಮ್ಮ ಪ್ರತಿನಿತ್ಯದ ಅಗತ್ಯಗಳಲ್ಲೊಂದು. ಉಪ್ಪಿಲ್ಲದೇ ಊಟ ಮಾಡುವುದು ಅಸಾಧ್ಯ. ಆಹಾರದ ರುಚಿಯನ್ನು ಹೆಚ್ಚಿಸಲು ಉಪ್ಪು ಬೇಕೇ ಬೇಕು. ಆದರೆ ದೇಹದಲ್ಲಿ ಥೈರಾಯ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳು ಬರದಂತೆ ನೋಡಿಕೊಳ್ಳಲು ನಾವು ಸಮತೋಲಿತ ಪ್ರಮಾಣದಲ್ಲಿ ಉಪ್ಪನ್ನು ಸೇವಿಸಬೇಕು.

ಥೈರಾಯ್ಡ್ ನಮ್ಮ ದೇಹದಲ್ಲಿ ಇರುವ ಒಂದು ಗ್ರಂಥಿಯಾಗಿದ್ದು, ಅದರ ಮೂಲಕ ಥೈರಾಕ್ಸಿನ್ (T4) ಮತ್ತು ಟ್ರೈ-ಅಯೋಡೋ-ಥೈರೋನಿನ್ (T3) ಎಂಬ ಎರಡು ರೀತಿಯ ಹಾರ್ಮೋನುಗಳು ಸ್ರವಿಸುತ್ತವೆ. ಅದು ನಮ್ಮ ದೇಹದ ಚಯಾಪಚಯವನ್ನು ನಿಯಂತ್ರಿಸುತ್ತದೆ. ಉಪ್ಪು ಮತ್ತು ಥೈರಾಯ್ಡ್ ನಡುವಿನ ಸಂಬಂಧವನ್ನು ಅರ್ಥಮಾಡಿಕೊಂಡರೆ ಯಾವ ಪ್ರಮಾಣದಲ್ಲಿ ಉಪ್ಪನ್ನು ಸೇವನೆ ಮಾಡಬೇಕು ಎಂಬುದನ್ನು ನೀವೇ ನಿರ್ಧರಿಸಿಬಿಡಬಹುದು.

ಥೈರಾಯ್ಡ್ ಗ್ರಂಥಿ ಎಂದರೇನು?

ಥೈರಾಯ್ಡ್ ಗ್ರಂಥಿಯು ನಮ್ಮ ಕುತ್ತಿಗೆಯಲ್ಲಿದೆ. ಇದು ಸಾಮಾನ್ಯವಾಗಿ 20 ರಿಂದ 30 ಗ್ರಾಂ ತೂಕವಿರುತ್ತದೆ. ಇದು ನಮ್ಮ ದೇಹದಲ್ಲಿನ ಅತಿದೊಡ್ಡ ಹಾರ್ಮೋನ್ ಗ್ರಂಥಿಯಾಗಿದೆ. ಇದು T3 ಮತ್ತು T4 ಗ್ರಂಥಿಗಳನ್ನು ಹೊಂದಿರುತ್ತದೆ, ಅದರ ಮೂಲಕ ಜೀರ್ಣಕ್ರಿಯೆ, ಸಕ್ಕರೆ ನಿಯಂತ್ರಣ, ಹೃದಯ ಬಡಿತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಥೈರಾಯ್ಡ್ ಗ್ರಂಥಿಯ ಊತ

ಈ ಗ್ರಂಥಿಯಲ್ಲಿ ಯಾವುದೇ ರೀತಿಯ ಊತವಿದ್ದರೆ, ಅದು ಸಮಸ್ಯೆ ಉಂಟುಮಾಡಬಹುದು. ಸಾಮಾನ್ಯವಾಗಿ ಅಯೋಡಿನ್ ಕೊರತೆಯಿಂದ ಈ ರೀತಿ ಊತ ಉಂಟಾಗುತ್ತದೆ. ಗಂಟಲು ಊದಿಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ಉಸಿರಾಟದ ಪ್ರದೇಶದಲ್ಲಿ ಒತ್ತಡ ಉಂಟಾಗುತ್ತದೆ. ನಂತರ ಉಸಿರಾಟದ ಸಮಸ್ಯೆ ಪ್ರಾರಂಭವಾಗುತ್ತದೆ. ಥೈರಾಯ್ಡ್ ಗ್ರಂಥಿಯು ಅತಿಯಾಗಿ ಬೆಳೆಯಲು ಪ್ರಾರಂಭಿಸಿದರೆ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು.

ಉಪ್ಪು ಮತ್ತು ಥೈರಾಯ್ಡ್ ಸಂಯೋಜನೆ

ಉಪ್ಪು ಮುಖ್ಯವಾಗಿ ಸೋಡಿಯಂನಿಂದ ಕೂಡಿದೆ, ಇದನ್ನು ಹೆಚ್ಚು ಸೇವಿಸಿದರೆ, ಥೈರಾಯ್ಡ್ ಗ್ರಂಥಿಗೆ ಹಾನಿಯಾಗುವುದು ಖಚಿತ. ಹಾರ್ಮೋನುಗಳ ಅತಿಯಾದ ಉತ್ಪಾದನೆಯು ಹೈಪರ್ ಥೈರಾಯ್ಡಿಸಮ್‌ನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಂತ ಉಪ್ಪನ್ನು ಸೇವಿಸದೇ ಇರುವುದು ಕೂಡ ಅಪಾಯಕಾರಿಯೇ. ಹಾಗಾಗಿ ಮಿತವಾಗಿ ಬಳಸುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read