ನೀರಿನ ಜೊತೆ ಈ ಮಸಾಲೆ ಪದಾರ್ಥ ಸೇವಿಸಿ ʼಚಮತ್ಕಾರʼ ನೋಡಿ

 

ಲವಂಗವನ್ನು ಮಸಾಲೆ ಪದಾರ್ಥದ ಶ್ರೇಣಿಯಲ್ಲಿಡಲಾಗುತ್ತದೆ. ಲವಂಗ ಆಹಾರದ ರುಚಿ ಹೆಚ್ಚಿಸುತ್ತದೆ. ಈ ಲವಂಗ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರತಿ ದಿನ ಲವಂಗ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. ರಾತ್ರಿ ಮಲಗುವ ಮೊದಲು ಎರಡು ಲವಂಗವನ್ನು ನೀರಿನ ಜೊತೆ ಸೇವನೆ ಮಾಡುವುದ್ರಿಂದ ಅನೇಕ ರೋಗಗಳು ದೂರ ಓಡುತ್ತವೆ.

ಲವಂಗದ ಸೇವನೆಯಿಂದ ಯಕೃತ್ತಿನ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಯಕೃತ್ತಿನಲ್ಲಿ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ. ಹಾಗೆ ಅದು ಆರೋಗ್ಯಕರವಾಗಿ ಕೆಲಸ ಮಾಡಲು ಲವಂಗ ನೆರವಾಗುತ್ತದೆ.

ಲವಂಗವನ್ನು ತಿನ್ನುವುದರಿಂದ ಮೂಳೆಗಳು ಬಲವಾಗಿರುತ್ತವೆ. ಮೂಳೆಗಳು ದುರ್ಬಲವಾಗಿರುವ ಜನರು ಮಲಗುವ ಮುನ್ನ ಪ್ರತಿ ರಾತ್ರಿ ಲವಂಗವನ್ನು ತಿನ್ನಬೇಕು.

ಮಧುಮೇಹದಂತಹ ಕಾಯಿಲೆ ಇರುವವರು ಲವಂಗವನ್ನು ಸೇವಿಸಬೇಕು. ಲವಂಗವನ್ನು ಸೇವಿಸುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ರಕ್ತದಲ್ಲಿನ ಸಕ್ಕರೆಯನ್ನು ಇದು ನಿಯಂತ್ರಣದಲ್ಲಿಡುತ್ತದೆ.

ಲವಂಗ ಜೀರ್ಣಕ್ರಿಯೆಗೆ ಒಳ್ಳೆಯದು. ಮಲಬದ್ಧತೆ ಮತ್ತು ಅನಿಲದ ಸಮಸ್ಯೆಗೂ ಇದು ಒಳ್ಳೆಯ ಮದ್ದು. ಹೊಟ್ಟೆ ನೋವು, ಅತಿಸಾರದಂತಹ ಕಾಯಿಲೆಗಳು ಕಾಡುವುದಿಲ್ಲ.

ಲವಂಗವನ್ನು ಪ್ರತಿದಿನ ತಿನ್ನುವುದ್ರಿಂದ ಕೆಮ್ಮು-ಶೀತ ದೂರವಾಗುತ್ತದೆ. ಲವಂಗವು ವಿಟಮಿನ್ ಸಿ ಹೊಂದಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read