ಕರ್ನಾಟಕದಲ್ಲಿ ಗೆಲುವಿನ ಹಾದಿಯಲ್ಲಿರುವ ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದೆ. ಬಹುಮತದ ಸಂಖ್ಯೆ ದಾಟುತ್ತಿದ್ದಂತೆ ಅಲರ್ಟ್ ಆಗಿರುವ ಕಾಂಗ್ರೆಸ್ ಶಾಸಕರನ್ನು ನೆರೆರಾಜ್ಯಕ್ಕೆ ಶಿಫ್ಟ್ ಮಾಡಲು ಮುಂದಾಗಿರೋದು ತಿಳಿದುಬಂದಿದೆ.
ಕಾಂಗ್ರೆಸ್ ಅಂತಿಮವಾಗಿ 110-115 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರ ಹೊಂದಿದ್ದು ತನ್ನ ಶಾಸಕರನ್ನು ತಮಿಳುನಾಡಿಗೆ ಕರೆದೊಯ್ಯಲು ಯೋಜಿಸಿದೆ. ಈಗಾಗಲೇ ಆಡಳಿತಾರೂಢ ಡಿಎಂಕೆ ನಾಯಕತ್ವದೊಂದಿಗೆ ಸಂಪರ್ಕದಲ್ಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸಂಜೆ ವೇಳೆಗೆ ಚುನಾಯಿತ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತರಲು ವ್ಯವಸ್ಥೆ ಮಾಡಲಾಗಿದೆ.
ಆರಂಭಿಕ ಮುನ್ನಡೆ ಗಳಿಸ್ತಿದ್ದಂತೆ, ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದು ತನ್ನ ವಿಶ್ವಾಸ ಹೆಚ್ಚಾಗಿದೆ ಎಂದಿದೆ.
“ನಾನು ಅಜೇಯ. ನಾನು ತುಂಬಾ ಆತ್ಮವಿಶ್ವಾಸ ಹೊಂದಿದ್ದೇನೆ.” ಎಂದು ಕಾಂಗ್ರೆಸ್ ಬೆಂಕಿಯ ಎಮೋಜಿಯೊಂದಿಗೆ ಟ್ವೀಟ್ ಮಾಡಿದೆ. ಜೊತೆಗೆ ಈಗಾಗಲೇ ಕಾಂಗ್ರೆಸ್ ಹಲವೆಡೆ ವಿಜಯೋತ್ಸವ ನಡೆಸಿದೆ.
https://twitter.com/INCIndia/status/1657221192741441537?ref_src=twsrc%5Etfw%7Ctwcamp%5Etweetembed%7Ctwterm%5E1657221192741441537%7Ctwgr%5Ecc0da6cf887042a2a465cc3a350b178110c4ca6d%7Ctwcon%5Es1_&ref_url=https%3A%2F%2Fwww.ndtv.com%2Findia-news%2Fkarnataka-election-results-2023-congresss-mission-protect-mlas-as-it-smells-victory-in-karnataka-4030582