BIG NEWS : ‘ಆಪರೇಷನ್ ಸಿಂಧೂರ್’ ಯಶಸ್ವಿಯಾಗಲಿ ಎಂದು ‘ತಿರಂಗಾ ಯಾತ್ರೆ’ ನಡೆಸಿದ ಕಾಂಗ್ರೆಸ್ |Operation Sindoor

ಬೆಂಗಳೂರು : ಭಾರತೀಯ ಸೇನೆ ನಡೆಸುತ್ತಿರುವ ‘ಆಪರೇಷನ್ ಸಿಂಧೂರ್ ‘ ಯಶಸ್ವಿಯಾಗಲಿ ಎಂದು ಕಾಂಗ್ರೆಸ್ ತಿರಂಗಾ ಯಾತ್ರೆ ನಡೆಸಿದೆ. ಹೌದು. ಉಗ್ರರ ರುಂಡ ಚೆಂಡಾಡಿದ ಭಾರತೀಯ ಯೋಧರ ಪರಾಕ್ರಮಕ್ಕೆ ಇನ್ನಷ್ಟು ಬಲ ಸಿಗಲಿ ಎಂದು ಹಾರೈಸಿ ಕಾಂಗ್ರೆಸ್ ಯಾತ್ರೆ ನಡೆಸಿದೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ದೇಶದ ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ನಮ್ಮ ಹೆಮ್ಮೆಯ ಸೈನಿಕರಿಗೆ ನೈತಿಕಸ್ಥೈರ್ಯ ತುಂಬುವ ಸಲುವಾಗಿ ಇಂದು “ತಿರಂಗಾ ಯಾತ್ರೆ” ಹೆಸರಿನಲ್ಲಿ ತ್ರಿವರ್ಣ ಧ್ವಜ ಹಿಡಿದು ಪಾದಯಾತ್ರೆಯಲ್ಲಿ ಹೆಜ್ಜೆಹಾಕುತ್ತಾ, ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿದೆವು. “ಭಯೋತ್ಪಾದನೆ ತೊಲಗಲಿ” ಎಂದು ಇಡೀ ದೇಶ ಒಂದು ದನಿಯಾಗಿ ನಿಂತಿದೆ. ಮತ್ತೊಮ್ಮೆ ಭಾರತ ನೆಲದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ಕೊಡುವ ಮೊದಲು ನೂರು ಬಾರಿ ಯೋಚಿಸುವಂತೆ ಪಾಕಿಸ್ತಾನಕ್ಕೆ ನಮ್ಮ ಸೇನೆ ಪಾಠ ಕಲಿಸಲಿದೆ ಎಂಬ ಪೂರ್ಣ ವಿಶ್ವಾಸವಿದೆ. ನಮ್ಮ ಸೈನ್ಯ ನಮ್ಮ ಹೆಮ್ಮೆ ಎಂದು ಟ್ವೀಟ್ ಮಾಡಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್

ದೇಶದ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ದೇಶದ ರಕ್ಷಣಾ ಪಡೆಗಳು ಕೈಗೊಂಡಿರುವ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಗೆ ಒಕ್ಕೊರಲಿನ ಬೆಂಬಲ ಸೂಚಿಸಿ, ಕೆ.ಆರ್. ವೃತ್ತದಿಂದ ಚಿನ್ನಸ್ವಾಮಿ ಕ್ರೀಡಾಂಗಣ ವೃತ್ತದವರೆಗೆ ನಡೆದ “ತಿರಂಗಾ ಯಾತ್ರೆ”ಯಲ್ಲಿ ಮುಖ್ಯಮಂತ್ರಿಗಳಾದ siddaramaiah ಅವರೊಂದಿಗೆ ಪಾಲ್ಗೊಂಡೆ.
ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಸಾಗಿದ ಮಕ್ಕಳು, ಹಿರಿಯರು, ಚಿಂತಕರು, ಸಾಹಿತಿಗಳು, ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು, ಸರ್ಕಾರಿ ಹಾಗೂ ಖಾಸಗಿ ಉದ್ದಿಮೆಗಳ ನೌಕರರು, ಚಿತ್ರರಂಗದವರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು, ನಾವೆಲ್ಲಾ ದೇಶದ ಪರವಾಗಿದ್ದೇವೆ ಎಂಬ ಪ್ರಬಲವಾದ ಸಂದೇಶವನ್ನು ಸಾರಿದರು. ನಮ್ಮ ಕರೆಗೆ ಓಗೊಟ್ಟು, ಈ ಮಹೋನ್ನತವಾದ ಉದ್ದೇಶವನ್ನು ಹೊಂದಿರುವ ಯಾತ್ರೆಯನ್ನು ಯಶಸ್ವಿಗೊಳಿಸಿದ ಸರ್ವರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read