ಕಾಂಗ್ರೆಸ್ ಮಾಜಿ ಶಾಸಕನ ಅಶ್ಲೀಲ ವಿಡಿಯೋ ವೈರಲ್: ಅಮಾನತು

ಜೈಪುರ: ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಮಾಜಿ ಶಾಸಕ ಮೇವಾರಂ ಜೈನ್ ಅವರನ್ನು ಕಾಂಗ್ರೆಸ್ ಪಕ್ಷದ ರಾಜಸ್ಥಾನ ಘಟಕ ಶನಿವಾರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.

ಬಾರ್ಮರ್ ಮಾಜಿ ಶಾಸಕ ಮೇವಾರಂ ಜೈನ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾದ ನಂತರ ಮತ್ತು ಅಶ್ಲೀಲ ಕೃತ್ಯದಲ್ಲಿ ಅವರನ್ನು ಒಳಗೊಂಡಿರುವ ಎರಡು ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಎರಡು ವೀಡಿಯೊಗಳು ಹೊರ ಬಂದ ನಂತರ, ಹಳೆಯ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಇದು ಲೈಂಗಿಕ ನಿಂದನೆ, ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲಿಂಗ್ ಮತ್ತು ಮನಿ ಲಾಂಡರಿಂಗ್ ಸೇರಿದಂತೆ ಆರೋಪಗಳ ಜಾಲ ಒಳಗೊಂಡಿದೆ.

ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ ಅವರು, “ಮೇವಾರಂ ಜೈನ್(ಮಾಜಿ ಶಾಸಕ ಬಾರ್ಮರ್) ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ. ಚಟುವಟಿಕೆಗಳು ಕಾಂಗ್ರೆಸ್ ಪಕ್ಷದ ಸಂವಿಧಾನದ ಅಡಿಯಲ್ಲಿ ಶಿಸ್ತಿನ ಉಲ್ಲಂಘನೆಯ ಸ್ಪಷ್ಟ ಸೂಚನೆಯಾಗಿದೆ ಎಂದು ತಿಳಿಸಿದ್ದಾರೆ.

https://twitter.com/ANI_MP_CG_RJ/status/1743862134973558906

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read