ನವದೆಹಲಿ: ದೇಶ ವಿಭಜನೆಗೆ ಕಾಂಗ್ರೆಸ್, ಜಿನ್ನಾ, ಮೌಂಟ್ ಬ್ಯಾಟನ್ ಅವರೇ ಹೊಣೆ ಎಂದು ಎನ್.ಸಿ.ಇ.ಆರ್.ಟಿ. ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ.
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್(ಎನ್.ಸಿ.ಇ.ಆರ್.ಟಿ.) ಪ್ರಕಟಿಸಿದ ದೇಶ ವಿಭಜನೆಯ ಕರಾಳ ದಿನ ಎಂಬ ವಿಶೇಷ ಪಠ್ಯಕ್ರಮದಲ್ಲಿ ದೇಶ ವಿಭಜನೆಗೆ ಕಾಂಗ್ರೆಸ್, ಮೊಹಮ್ಮದ್ ಅಲಿ ಜಿನ್ನಾ ಮತ್ತು ವೈಸ್ ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರೇ ಕಾರಣವೆಂದು ಉಲ್ಲೇಖಿಸಲಾಗಿದೆ.
ಜಿನ್ನಾ ದೇಶ ವಿಭಜನೆಯನ್ನು ಪ್ರಸ್ತಾಪಿಸಿದ್ದರು. ಕಾಂಗ್ರೆಸ್ ಅದನ್ನು ಅಂಗೀಕರಿಸಿತು. ಮೌಂಟ್ ಬ್ಯಾಟನ್ ಅದನ್ನು ಜಾರಿಗೊಳಿಸಿದರು ಎಂದು ಅಧ್ಯಾಯದಲ್ಲಿ ಹೇಳಲಾಗಿದ್ದು, ಈ ಮೂವರನ್ನು ದೇಶ ವಿಭಜನೆಯ ಅಪರಾಧಿಗಳು ಎಂದು ತಿಳಿಸಲಾಗಿದೆ.
