ಬೆಂಗಳೂರು : ಯುದ್ಧದ ಸಮಯದಲ್ಲಿ ಸರ್ಕಾರದೊಂದಿಗೆ, ಸೈನಿಕರ ಪರವಾಗಿ ನಿಂತ ತಮ್ಮದೇ ಪಕ್ಷದ ನಾಯಕರ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿರುವುದು ವಿಲಕ್ಷಣ ಘಟನೆಯಾಗಿದೆ. ದೇಶದ ಪರವಾಗಿ ನಿಲ್ಲುವ ತಮ್ಮದೇ ನಾಯಕರನ್ನು ಬೆದರಿಸುವ ಮೂಲಕ ದೇಶದ ಪರವಾಗಿ ನಿಲ್ಲಬೇಡಿ ಎಂದು ಪರೋಕ್ಷ ಸೂಚನೆ ನೀಡುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಭಯೋತ್ಪಾದಕ ರಾಷ್ಟ್ರ ಪಾಕಿಸ್ಥಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ದೇಶ ಮಾತ್ರವಲ್ಲದೆ ವಿಶ್ವದೆಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಯೋತ್ಪಾದಕರನ್ನು, ಭಯೋತ್ಪಾದಕ ಶಿಬಿರಗಳನ್ನು, ಉಗ್ರರಿಗೆ ನೆರವು ನೀಡುತ್ತಿದ್ದವರನ್ನು ಗುರಿಯಾಗಿಸಿಕೊಂಡು ನಡೆದ ಪ್ರತೀಕಾರದ ದಾಳಿಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಅವರ ವಿರುದ್ಧ ಕಾಂಗ್ರೆಸ್ ಕೆಂಡ ಕಾರುತ್ತಿದೆ ಮತ್ತು ಕ್ರಮಕೈಗೊಳ್ಳುವುದಾಗಿ ಬೆದರಿಸುತ್ತಿದೆ.
ಯುದ್ಧದ ಸಮಯದಲ್ಲಿ ಸರ್ಕಾರದೊಂದಿಗೆ, ಸೈನಿಕರ ಪರವಾಗಿ ನಿಂತ ತಮ್ಮದೇ ಪಕ್ಷದ ನಾಯಕರ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿರುವುದು ವಿಲಕ್ಷಣ ಘಟನೆಯಾಗಿದೆ. ದೇಶದ ಪರವಾಗಿ ನಿಲ್ಲುವ ತಮ್ಮದೇ ನಾಯಕರನ್ನು ಬೆದರಿಸುವ ಮೂಲಕ ದೇಶದ ಪರವಾಗಿ ನಿಲ್ಲಬೇಡಿ ಎಂದು ಪರೋಕ್ಷ ಸೂಚನೆ ನೀಡುತ್ತಿದೆ.
ಕಾಂಗ್ರೆಸ್ ಏಕೆ ದೇಶದ ಪರವಾಗಿ ಯೋಚಿಸಲು, ಚಿಂತಿಸಲು ಕಷ್ಟಪಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಪಾಕಿಸ್ಥಾನ, ಟರ್ಕಿಯ ವಿರುದ್ಧ ನಿಂತರೆ ಭಾರತದಲ್ಲಿ ಮತ ಬ್ಯಾಂಕ್ ಕಳೆದುಕೊಳ್ಳುವ ಭಯ ಅವರನ್ನು ಕಾಡುತ್ತಿರಬಹುದೇ? ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಭಯೋತ್ಪಾದಕ ರಾಷ್ಟ್ರ ಪಾಕಿಸ್ಥಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ದೇಶ ಮಾತ್ರವಲ್ಲದೆ ವಿಶ್ವದೆಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಯೋತ್ಪಾದಕರನ್ನು, ಭಯೋತ್ಪಾದಕ ಶಿಬಿರಗಳನ್ನು, ಉಗ್ರರಿಗೆ ನೆರವು ನೀಡುತ್ತಿದ್ದವರನ್ನು ಗುರಿಯಾಗಿಸಿಕೊಂಡು ನಡೆದ ಪ್ರತೀಕಾರದ ದಾಳಿಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ಪಕ್ಷದ… pic.twitter.com/6KdBz8hAYD
— BJP Karnataka (@BJP4Karnataka) May 16, 2025