ಬೆಲೆ ಏರಿಕೆಯನ್ನೇ ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ಜನರ ರಕ್ತ ಹೀರುತ್ತಿದೆ : ಬೆಣ್ಣೆ-ತುಪ್ಪದ ಬೆಲೆ ಏರಿಕೆಗೆ ಜೆಡಿಎಸ್ ಆಕ್ರೋಶ.!

ಬೆಂಗಳೂರು : ಬೆಲೆ ಏರಿಕೆಯನ್ನೇ ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ಜನರ ರಕ್ತ ಹೀರುತ್ತಿದೆ ಎಂದು ತುಪ್ಪದ ಬೆಲೆ ಏರಿಕೆಗೆ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಜೆಡಿಎಸ್ ‘ಬಂಡವಾಳವಿಲ್ಲದ ಬಡಾಯಿ ಕಾಂಗ್ರೆಸ್ ಬೆಲೆ ಏರಿಕೆಯನ್ನೇ ಬಂಡವಾಳ ಮಾಡಿಕೊಂಡು, ಕರ್ನಾಟಕದ ಜನರ ರಕ್ತ ಹೀರುತ್ತಿದೆ. ಇಷ್ಟು ದಿನ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದ ಕಾಂಗ್ರೆಸ್ ನಾಯಕರು, #GST ಸರಳೀಕರಣದ ಬಳಿಕ ರಾಜ್ಯದಲ್ಲಿ ಬೆಲೆಗಳ ಇಳಿಕೆ ಮಾಡಬೇಕಿತ್ತು. ಆದರೆ ಏಕಾಏಕಿ ನಂದಿನಿ ತುಪ್ಪದ ಬೆಲೆಯನ್ನು ಪ್ರತಿ ಕೆಜಿಗೆ 90 ರೂ. ಹಾಗೂ ಬೆಣ್ಣೆ ಪ್ರತಿ ಕೆಜಿಗೆ 38 ರೂ. ಏರಿಸುವ ಮೂಲಕ ಗ್ರಾಹಕರ ಹಗಲು ದರೋಡೆಗೆ ಇಳಿದಿದೆ’.

‘ಜನ ವಿರೋಧಿ ಕಾಂಗ್ರೆಸ್ ಸರ್ಕಾರದಿಂದ ನಾಡಿನ ಬಡವರು, ಜನಸಾಮಾನ್ಯರ ಉದ್ಧಾರ ಅಸಾಧ್ಯ. ಕಾಂಗ್ರೆಸ್ ಸರ್ಕಾರದ ನಿರಂತರ ಬೆಲೆ ಏರಿಕೆಗೆ ಕನ್ನಡಿಗರು ಪ್ರತಿ ದಿನ ಬೆಂದು ಹೋಗುತ್ತಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರ ಹಿಡಿದ ಕಾಂಗ್ರೆಸ್, ಕಳೆದ ೨.೫ ವರ್ಷದಲ್ಲಿ ಮಾಡಿದ ಬೆಲೆ ಏರಿಕೆಗಳಿಗೆ ಲೆಕ್ಕವೇ ಇಲ್ಲ. ಅವೈಜ್ಞಾನಿಕ ಗ್ಯಾರಂಟಿಗಾಗಿ ಜನರ ಸುಲಿಗೆಯನ್ನೇ ವೃತ್ತಿಮಾಡಿಕೊಂಡು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಬಸ್, ಮೆಟ್ರೋ ಪ್ರಯಾಣ ದರ, ಹಾಲು, ಮೊಸರು, ನೀರು, ವಿದ್ಯುತ್ ಬೆಲೆ ಹೆಚ್ವಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ’ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read