ವಿಜಯೇಂದ್ರರನ್ನು ಕೆಳಗಿಳಿಸಲು ಬಂಡಾಯ ಬಣಕ್ಕೆ ತೆರೆ ಮರೆಯಲ್ಲಿ ಕೀ ಕೊಡುತ್ತಿರುವ ಕಾಣದ ಕೈ ಯಾವುದು? ಕಮಲ ನಾಯಕರಿಗೆ ಟಾಂಗ್ ನೀಡಿದ ಕಾಂಗ್ರೆಸ್

ಬೆಂಗಳೂರು: ತಂದಿಟ್ಟು ತಮಾಷೆ ನೋಡುವ, ಮನೆಹಾಳು ಬುದ್ಧಿಯ ರಾಜ್ಯ ಬಿಜೆಪಿಗೆ ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಸಹಿಸಲಾಗುತ್ತಿಲ್ಲ ಎಂಬುದು ಮತ್ತೆ ಖಾತರಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟಾಂಗ್ ನೀಡಿದೆ.

ನಮ್ಮ ಪಕ್ಷದಲ್ಲಿ ದಿಲ್ಲಿಯಿಂದ ಹಳ್ಳಿವರೆಗೂ ಪ್ರತಿಯೊಬ್ಬರೂ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ. ಅಂದಹಾಗೆ, ನಿಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬೆನ್ನಿಗೆ ಎಷ್ಟು ಜನ ಇದ್ದಾರೆ, ಬೆನ್ನಿಗೆ ಚೂರಿ ಹಾಕಲು ಎಷ್ಟು ಜನ ಪ್ರಯತ್ನಿಸುತ್ತಿದ್ದಾರೆ ಎಂಬುದರ ಮಾಹಿತಿಯನ್ನೊಮ್ಮೆ ಬಹಿರಂಗಪಡಿಸಿ. ವಿಜಯೇಂದ್ರ ಅವರನ್ನು ಅಧಿಕಾರದಿಂದ ಇಳಿಸಲು ಬಂಡಾಯ ಬಣಕ್ಕೆ ತೆರೆ ಮರೆಯಲ್ಲಿ ಕೀ ಕೊಡುತ್ತಿರುವ ಕಾಣದ ಕೈ ಯಾವುದು? ನಿಮ್ಮ ಮಾತೃ ಪರಿವಾರವೇ ಅಥವಾ ಹಿರಿಯ ನಾಯಕರನ್ನು ಬಳಸಿ ಬಿಸಾಡುವ ಮನಸ್ಥಿತಿ ಹೊಂದಿರುವ ಕೇಂದ್ರದ ನಾಯಕರೇ? ಎಂದು ಪ್ರಶ್ನಿಸಿದೆ.

ಶಿಸ್ತಿನ ಪಕ್ಷ ಎಂದು ಹೇಳಿಕೊಂಡು ಹಾದಿ ಬೀದಿಯಲ್ಲಿ ಬಂಡಾಯ ಬಾವುಟ ಹಾರಿಸುತ್ತಿರುವವರಿಗೆ ರಾಜಾತಿಥ್ಯ ನೀಡುತ್ತಿರುವ ನೀವು, ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಬಗ್ಗೆ ಸುಳ್ಳು ಸುದ್ದಿ ಹರಿಬಿಡುತ್ತಿರುವುದನ್ನು ನೋಡಿ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read