ಬೆಂಗಳೂರು : ಸೌಜನ್ಯ ನ್ಯಾಯಕ್ಕಾಗಿ ಪ್ರತಿಭಟನೆ/ಸಭೆ ನಡೆಸುವ ಹಕ್ಕನ್ನು ಎತ್ತಿಹಿಡಿದ ಹೈಕೋರ್ಟ್ಗೆ ಅಭಿನಂದನೆಗಳು ಎಂದು ನಟ ಚೇತನ ಅಹಿಂಸಾ ಹೇಳಿದ್ದಾರೆ.
ಸೌಜನ್ಯ ಅವರಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ 19ನೇ ವಿಧಿ ಮತ್ತು ಪ್ರತಿಭಟನೆ/ಸಭೆ ನಡೆಸುವ ಹಕ್ಕನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ಗೆ ಅಭಿನಂದನೆಗಳು.
ಈ ವಿಷಯ ಬಂದಾಗ, ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸುವ ಅಧಿಕಾರ ಹೊಂದಿರುವವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತಾ ಬಂದಿದ್ದಾರೆ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಸತ್ಯ ಮತ್ತು ನ್ಯಾಯದ ಪರವಾಗಿ ಸಂವಿಧಾನವನ್ನು ವ್ಯಾಖ್ಯಾನಿಸುವ ಮೂಲಕ ನಿರಂತರವಾಗಿ ತೀರ್ಪುಗಳನ್ನು ನೀಡಿತ್ತಾ ಬಂದಿದ್ದಾರೆ ಎಂದು ನಟ ಚೇತನ ಅಹಿಂಸಾ ಹೇಳಿದ್ದಾರೆ.