ಬೆಂಗಳೂರು: ‘ಭರ್ಜರಿ ಬ್ಯಾಚುಲರ್’ ರಿಯಾಲಿಟಿ ಶೋನಲ್ಲಿ ನಟಿಸಿರುವ ನಟಿ ರೆಮೋಲಾ ವಿರುದ್ಧ ಫಿಲಂ ಚೇಂಬರ್ ಗೆ ದೂರು ನೀಡಲಾಗಿದೆ.
ಹೌದು, ‘ರಿಚ್ಚಿ’ ಸಿನಿಮಾ ತಂಡದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಗೆ ದೂರು ನೀಡಲಾಗಿದೆ. ನಟಿ ರೆಮೋಲಾ ಅವರು ಕರೆಗೆ ಸ್ಪಂದಿಸುತ್ತಿಲ್ಲ. ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ. ಅವರನ್ನು ಕರೆದು ಮಾತನಾಡಿ ಕ್ರಮ ಕೈಗೊಳ್ಳಬೇಕು ಎಂದು ನಟ ರಿಚ್ಚಿ ಸೇರಿ ಚಿತ್ರತಂಡದವರು ಮನವಿ ಮಾಡಿದ್ದಾರೆ. ದೂರನ್ನು ಸ್ವೀಕರಿಸಿರುವ ಫಿಲಂ ಚೇಂಬರ್ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.
ಧಾರಾವಾಹಿ, ರಿಯಾಲಿಟಿ ಶೋ, ಸಿನಿಮಾ, ವೆಬ್ ಸೀರೀಸ್ ಗಳಲ್ಲಿ ನಟಿಸಿ ರೆಮೋಲಾ ಚಿರಪರಿಚಿತರಾಗಿದ್ದಾರೆ. ಕನ್ನಡದ ಅಮೃತಧಾರೆ, ಅಂತರಪಟ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿರುವ ಅವರು ‘ರಿಚ್ಚಿ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರತಂಡದಿಂದಲೇ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ.