ಹೊಸ ಉದ್ಯೋಗ ಸಿಕ್ಕರೂ ಬಿಡದ ಹಳೆಯ ಬಾಸ್​: ವೈರಲ್​ ಸುದ್ದಿಗೆ ಸಲಹೆಗಳ ಮಹಾಪೂರ

ಒಬ್ಬರು ತಮ್ಮ ಕೆಲಸವನ್ನು ತ್ಯಜಿಸಲು ಮತ್ತು ಹೊಸದನ್ನು ಪ್ರಾರಂಭಿಸಲು ಬಯಸಿದರೆ, ಆ ಹೊಸತು ಸಿಕ್ಕರೂ ಮಾಡಲು ಆಗದಿದ್ದರೆ ಹೇಗೆ ಮನಸ್ಥಿತಿ ಇರುತ್ತದೆ ಎಂದು ಊಹಿಸುವುದೂ ಕಷ್ಟ.

ಅಂಥದ್ದೇ ಒಂದು ಸುದ್ದಿಯೀಗ ವೈರಲ್​ ಆಗಿದೆ. ಹೊಸ ಕೆಲಸ ಸಿಕ್ಕರೂ, ಹಳೆಯ ಬಾಸ್​ ಬಿಡದ ಬಗ್ಗೆ ವ್ಯಕ್ತಿಯೊಬ್ಬರು ಬರೆದುಕೊಂಡಿದ್ದು, ಇದಕ್ಕೆ ಥರಹೇವಾರಿ ಕಮೆಂಟ್ಸ್​ಬಂದಿವೆ.

‘u/WorthlessFloor7’ ಬಳಕೆದಾರರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ ನಂತರ ಏನಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಆ್ಯಂಟಿ ವರ್ಕ್ ಸಬ್‌ರೆಡಿಟ್‌ನಲ್ಲಿ, ಉದ್ಯೋಗಿ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ ನಂತರ ಅವರು ಸ್ವೀಕರಿಸಿದ ಪ್ರತಿಕ್ರಿಯೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.

“ನನ್ನ ಕೆಲಸವನ್ನು ಬಿಡಲು ಪ್ರಯತ್ನಿಸಿದೆ ಮತ್ತು ಅವರು ಇಲ್ಲ ಎಂದು ಹೇಳಿದರು” ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಸ್ಕ್ರೀನ್‌ಶಾಟ್‌ನಲ್ಲಿ ಕಂಪೆನಿಯು ಉದ್ಯೋಗಿಗೆ ಕನಿಷ್ಠ ಒಂದು ವರ್ಷದವರೆಗೆ ಕಂಪೆನಿಗೆ ಬದ್ಧವಾಗಿರಬೇಕು ಎಂದು ಹೇಳಿರುವುದನ್ನು ಕಾಣಬಹುದು.

4 ವಾರಗಳ ನೋಟಿಸ್​ ಪಿರಿಯಡ್​ ಮುಗಿಸಬೇಕು ಎಂದು ಷರತ್ತು ಇದೆ. ಅದನ್ನು ನಾನು ಪಾಲಿಸಿದರೂ ಈಗ ಒಂದು ವರ್ಷ ಎನ್ನುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಹೇಳಿದ್ದಾರೆ. ಇದಕ್ಕೆ ಥರಹೇವಾರಿ ಕಮೆಂಟ್​ಗಳು ಬಂದಿದೆ. ಕೆಲಸಕ್ಕೆ ಸೇರುವಾಗ ಆರಂಭದಲ್ಲಿ ಯಾವೆಲ್ಲಾ ಷರತ್ತುಗಳಿಗೆ ಸಹಿ ಹಾಕಿದ್ದೀರಿ ಎನ್ನುವುದನ್ನು ಮತ್ತೊಮ್ಮೆ ಓದಿ ಎಂದು ಹಲವರು ಸಲಹೆ ಕೊಟ್ಟಿದ್ದಾರೆ.

Tried to quit my job and they said no
byu/WorthlessFloor inantiwork

https://twitter.com/BadGyalMisty/status/1609920054568620032?ref_src=twsrc%5Etfw%7Ctwcamp%5Etweetembed%7Ctwterm%5E1609920054568620032%7Ctwgr%5E077070333a646307097192fdce8e23d8471d8849%7Ctwcon%5Es1_&ref_url=https%3A%2F%2Fwww.news18.com%2Fbuzz%2Fcompany-declares-reddit-user-employee-of-the-year-days-after-rejecting-resignation-letter-6800185.html

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read