ಕಲಬುರಗಿ: ರಸ್ತೆ ಕಾಮಗಾರಿ ಬಿಲ್ ಪಾವತಿಗೆ ಕಮಿಷನ್ ಕೇಳಿದ್ದ ಜೆಇ ಹಾಗೂ ಪಿಡಿಓ ಸೇರಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ರಸ್ತೆ ಕಾಮಗಾರಿ ಬಿಲ್ ಪಾವತಿಗೆ ಜೆಇ ಶ್ರೀಪಾದ್ ಕುಲಕರ್ಣಿ ಲಂಚ ಕೇಳುವ ವಿಡಿಯೋ ವೈರಲ್ ಆಗಿತ್ತು. 15ನೇ ಹಣಕಾಸು ಯೋಜನೆಯಡಿ ನಡೆದಿದ್ದ ರಸ್ತೆ ಕಾಮಗಾರಿ ಬಿಗ್ ಗೆ ಅಧಿಕಾರಿ ಕಮಿಷನ್ ಕೇಳಿದ್ದರು. ಕಾಮಗಾರಿ ಬಿಲ್ ಗೆ 5 ಪರ್ಸೆಂಟ್ ಲಂಚ ಕೇಳಿದ್ದರು. ಪಿಡಿಓ 3 ಪರ್ಸೆಂಟ್ ಕೇಳ್ತಾರೆ ಅವರಿಗೂ ಹಣ ಕೊಡಬೇಕು ಎಂದಿದ್ದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಮೇರೆಗೆ ಕಲಬುರಗಿ ಜಿಲ್ಲಾ ಸಿಇಒ ಭವರ ಸಿಂಗ್ ಮೀನಾ, ಜೆಇ ಶ್ರೀಪಾದ ಕುಲಕರ್ಣಿ ಹಾಗೂ ಪಿಡಿಓ ಮಂಜುಶ್ರೀ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.