BREAKING NEWS: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಬೋಂಡಾ ಮಣಿ ಇನ್ನಿಲ್ಲ !

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಬೋಂಡಾ ಮಣಿ ಶನಿವಾರ ಕೊನೆಯುಸಿರೆಳೆದರು. 60 ವರ್ಷದ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಬೋಂಡಾ ಮಣಿ ಸಾವನ್ನಪ್ಪಿದ್ದಾರೆ. ಬೋಂಡಾ ಮಣಿ ಅವರು ರಾತ್ರಿ ಚೆನ್ನೈನ ತಮ್ಮ ನಿವಾಸದಲ್ಲಿ ಮೂರ್ಛೆ ಹೋಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಪರೀಕ್ಷೆಯ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ಬೋಂಡಾ ಮಣಿ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ನಟ ಔಷಧೋಪಚಾರದಲ್ಲಿದ್ದರು.

ಸೆಪ್ಟೆಂಬರ್ 2022 ರಲ್ಲಿ, ಅವರ ಎರಡೂ ಮೂತ್ರಪಿಂಡಗಳು ವಿಫಲವಾದ ಕಾರಣ ಅವರು ವೈದ್ಯಕೀಯ ಚಿಕಿತ್ಸೆಗೆ ಒಳಗಾದರು. ನಟರಾದ ಧನುಷ್ ಮತ್ತು ವಿಜಯ್ ಸೇತುಪತಿ ಬೋಂಡಾ ಮಣಿಯ ಚಿಕಿತ್ಸೆಗಾಗಿ ತಲಾ 1 ಲಕ್ಷ ರೂ. ನೀಡಿದ್ದರು.

ಬೋಂಡಾ ಮಣಿ ಅವರು ವಡಿವೇಲು ಅವರೊಂದಿಗೆ ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಿಧನಕ್ಕೆ ಅನೇಕ ತಾರೆಯರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಬೋಂಡಾ ಮಣಿ ಅವರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದು, ಭಾನುವಾರ ಸಂಜೆ 5 ಗಂಟೆಗೆ ಅಂತಿಮ ಸಂಸ್ಕಾರ ನಡೆಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read