WATCH VIDEO : ಬಾ ಶೆಡ್ಡಿಗ್ ಹೋಗಿ ಕುಂಟೆಬಿಲ್ಲೆ ಆಡೋಣ… ; ಈ ವಿಡಿಯೋ ಭಾರಿ ವೈರಲ್..!

ಬೆಂಗಳೂರು : ಮಾಡೋಕೆ ಕೆಲಸ ಇಲ್ಲ…! ಬಾ ಶೆಡ್ಡಿಗ್ ಹೋಗಿ ಕುಂಟೆಬಿಲ್ಲೆ ಆಡೋಣ ..! ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಹೌದು, ಕನ್ನಡದ ಸುದ್ದಿ ವಾಹಿನಿಯ ಖ್ಯಾತ ನಿರೂಪಕರೊಬ್ಬರು ಮಾಡಿದ ವಿಡಿಯೋ ಈಗ ಎಲ್ಲಾ ಕಡೆ ರೀಲ್ಸ್ ಆಗಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಜೈಲಿನ ಬಳಿ ಬಂದ ಮಾಧ್ಯಮದವರನ್ನು ಕೆಣಕಿದ ಪವಿತ್ರಾ ಗೌಡ ತಮ್ಮ ‘ ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ಲವಾ..? ಎಂದು ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಕನ್ನಡದ ಸುದ್ದಿ ವಾಹಿನಿಯ ಖ್ಯಾತ ನಿರೂಪಕರೊಬ್ಬರು ಮಾಡೋಕೆ ಕೆಲಸ ಇಲ್ಲ…! ಬಾ ಶೆಡ್ಡಿಗ್ ಹೋಗಿ ಕುಂಟೆಬಿಲ್ಲೆ ಆಡೋಣ ಎಂದು ವಿಡಿಯೋವೊಂದನ್ನು ಮಾಡಿ ತಿರುಗೇಟು ನೀಡಿದ್ದರು. ನಿರೂಪಕರೊಬ್ಬರು ಮಾಡಿದ ವಿಡಿಯೋ ಈಗ ಎಲ್ಲಾ ಕಡೆ ರೀಲ್ಸ್ ಆಗಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ಅನುಸರಿಸಿ ಹಲವರು ರೀಲ್ಸ್ ಮಾಡುತ್ತಿದ್ದಾರೆ. ಬಾ ಶೆಡ್ಡಿಗ್ ಹೋಗಿ ಕುಂಟೆಬಿಲ್ಲೆ ಆಡೋಣ ಎಂದು ರೀಲ್ಸ್ ಮಾಡಿ ಹರಿಬಿಡುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ನಡೆದ ಜಾಗ ಬೆಂಗಳೂರಿನ ಪಟ್ಟಣಗೆರೆ ಶೆಡ್ ಇದೀಗ ಭಾರಿ ಸುದ್ದಿಯಲ್ಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಪಾಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸದ್ಯದಲ್ಲೇ ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಲಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read