ಬೆಂಗಳೂರು: ಬೆಂಗಳೂರಿನಲ್ಲಿ ಹಲ್ಲೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಖಾಸಗಿ ಕಾಲೇಜು ಪ್ರಾಧ್ಯಾಪಕರೊಬ್ಬರ ಮೇಲೆ ಮೂವರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಅರಬಿಂದ್ ಗುಪ್ತಾ ಹಲ್ಲೆಗೊಳಗಾದ ಪ್ರಾಧ್ಯಾಪಕ. ಮೂವರು ಯುವಕರು ಅರಬಿಂದ್ ಗುಪ್ತಾ ಮೇಲೆ ಹಲ್ಲೆ ನಡೆಸಿದ್ದಾರೆ. ಕೆ ಎಸ್ ಲೇಔಟ್ ನ ಜೆಹೆಚ್ ಬಿಸಿ ಎಸ್ ಲೇಔಟ್ ನಲ್ಲಿ ಈ ಘಟನೆ ನಡೆದಿದೆ.
ಬೈಕ್ ನಲ್ಲಿ ತೆರಳುತ್ತಿದ್ದ ಪ್ರೊಫೇಸರ್ ಅರಬಿಂದ್ ಗುಪ್ತಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆಟೋದಲ್ಲಿದ್ದ ಮೂವರು ಯುವಕರು ಟೀ ಗ್ಲಾಸ್ ನ್ನು ರಸ್ತೆಗೆ ಬಿಸಾಕಿದ್ದಾರೆ. ಅಲ್ಲದೇ ಆಟೋವನ್ನು ಬೈಕ್ ಗೆ ಟಚ್ ಮಾಡುವ ರೀತಿಯಲ್ಲಿ ಆಟೋ ಓಡಿಸಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮೂವರು ಯುವಕರು ಪ್ರೊಫೇಸರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಎನ್ ಸಿಆರ್ ದಾಖಲಾಗಿದೆ.