ವಾರದಲ್ಲಿ ಮೂರು ದಿನ ಕಚೇರಿಯಲ್ಲಿ ಕೆಲಸ: ಭಾರತದ ಉದ್ಯೋಗಿಗಳಿಗೆ ಕಾಗ್ನಿಜೆಂಟ್ ಸೂಚನೆ

ಅಮೆರಿಕ ಮೂಲದ ಐಟಿ ಸಂಸ್ಥೆ ಕಾಗ್ನಿಜೆಂಟ್ ವರ್ಕ್ ಫ್ರಂ ಹೋಂ ಪದ್ಧತಿಯನ್ನು ನಿಧಾನವಾಗಿ ಕೈ ಬಿಡುತ್ತಿದ್ದು, ವಾರಕ್ಕೆ ಕನಿಷ್ಠ ಮೂರು ಬಾರಿ ಕಚೇರಿಯಿಂದ ಕೆಲಸ ಮಾಡುವಂತೆ ಭಾರತದ ಉದ್ಯೋಗಿಗಳಿಗೆ ಸೂಚನೆ ನೀಡಿದೆ.

ಕೊರೋನಾ ಸಂದರ್ಭದಲ್ಲಿ ವರ್ಕ್ ಫ್ರಮ್ ಹೋಂ ಪದ್ಧತಿ ಆರಂಭಗೊಂಡಿದ್ದು, ಅದನ್ನು ಐಟಿ ಕಂಪನಿಗಳು ನಿಧಾನವಾಗಿ ಕೈ ಬಿಡುತ್ತಿದ್ದು, ಈ ಸಾಲಿಗೆ ಕಾಗ್ನಿಜೆಂಟ್ ಕೂಡ ಸೇರ್ಪಡೆಯಾಗಿದೆ.

ಕಾಗ್ನಿಜೆಂಟ್ ಸಿಇಒ ರವಿಕುಮಾರ್ ಎಸ್ ಅವರು, ವಾರಕ್ಕೆ ಸರಾಸರಿ ಮೂರು ದಿನ ಉದ್ಯೋಗಿಗಳು ಕಚೇರಿಯಲ್ಲಿ ಕೆಲಸ ಮಾಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ. ತರಬೇತಿ ಮತ್ತು ತಂಡ ನಿರ್ಮಾಣದಂತಹ ಕೆಲಸಗಳಿಗೆ, ಸಹಯೋಗದ ಯೋಜನೆಗಳಿಗೆ ಕಚೇರಿಯಲ್ಲಿ ಕೆಲಸ ಮಾಡುವ ಪದ್ಧತಿಯಿಂದ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ಕಾಗ್ನಿಜೆಂಟ್‌ನ 3,47,700 ಉದ್ಯೋಗಿಗಳಲ್ಲಿ ಸುಮಾರು 2,54,000 ಉದ್ಯೋಗಿಗಳು ಭಾರತದಲ್ಲಿ ನೆಲೆಸಿದ್ದಾರೆ, ಅದರ ವಾರ್ಷಿಕ ವರದಿಯ ಪ್ರಕಾರ ಇದು ಸಂಸ್ಥೆಯ ಅತಿದೊಡ್ಡ ಉದ್ಯೋಗಿ ಮೂಲವಾಗಿದೆ.

ಭಾರತೀಯ ಕಂಪನಿಗಳಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್ ಮತ್ತು ವಿಪ್ರೋ 2023 ರಲ್ಲಿ ಉದ್ಯೋಗಿಗಳನ್ನು ಕಚೇರಿಗೆ ಮರಳಲು ಕಡ್ಡಾಯಗೊಳಿಸಿದೆ, TCS ವಾರಕ್ಕೆ ಐದು ದಿನಗಳ ವೇಳಾಪಟ್ಟಿಯನ್ನು ಹಾಕಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read