ಮಾಯಿಶ್ಚರೈಸರ್‌ ನಂತೆ ಕೆಲಸ ಮಾಡುತ್ತೆ ತೆಂಗಿನೆಣ್ಣೆ

ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು, ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಮೈಗೆ ಹಚ್ಚಿಕೊಂಡರಂತೂ ಯಾವ ಮಾಯಿಶ್ಚರೈಸರ್‌ ಮಾಡದ ಚಮತ್ಕಾರವನ್ನು ತೆಂಗಿನೆಣ್ಣೆ ಮಾಡುತ್ತದೆ.

ತ್ವಚೆ ಸಮಸ್ಯೆಗಂತೂ ಇದು ಅತ್ಯುತ್ತಮ ಮನೆಮದ್ದಾಗಿದೆ.

* ಒಣ ತ್ವಚೆಯೇ, ಹಾಗಿದ್ದಲ್ಲಿ ದಿನಾ ತೆಂಗಿನೆಣ್ಣೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ಒಣ ತ್ವಚೆಯ ಕಿರಿಕಿರಿಯಿಂದ ಪಾರಾಗಬಹುದು.

* ಮುಖದ ಮೇಕಪ್‌ ತೆಗೆಯಲು ತೆಂಗಿನೆಣ್ಣೆ ಬಳಸುವುದರಿಂದ ಎರಡು ಲಾಭ. ಒಂದು ಸುಲಭವಾಗಿ ಮೇಕಪ್‌ ತೆಗೆಯಬಹುದು ಹಾಗೇ ಮೇಕಪ್‌ ತ್ವಚೆ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಲಿಪ್ ಸ್ಟಿಕ್ ಬಣ್ಣ ಕೂಡ ಆರಾಮಾಗಿ ತೆಗೆಯಬಹುದು.

* ಮುಖದಲ್ಲಿ ಜಿಡ್ಡಿನಂಶವಿದ್ದರೆ ಮೊಡವೆ ಸಮಸ್ಯೆ ಸಾಮಾನ್ಯ. ಆದರೆ ತೆಂಗಿನೆಣ್ಣೆಯಿಂದ ದಿನಾ ಮಸಾಜ್ ಮಾಡಿದ್ರೆ ಮೊಡವೆ ಬರುವುದನ್ನು ತಡೆಯಬಹುದು ಹಾಗೂ ತ್ವಚೆಯೂ ಕೋಮಲವಾಗಿ ಇರುತ್ತದೆ.

* ಬಿಸಿಲಿಗೆ ಹೋಗುವ ಮುನ್ನ ಕೈ-ಕಾಲಿಗೆ ತೆಂಗಿನೆಣ್ಣೆ ಹಚ್ಚಿದರೆ, ಒಡೆದ ಚರ್ಮವನ್ನು ಮರೆ ಮಾಚಬಹುದು. ನೈಸರ್ಗಿಕವಾದ ಸನ್‌ ಸ್ಕ್ರೀನ್ ನಂತೆ ಇದು ಕೆಲಸ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read