ಉರಗ ತಜ್ಞನೊಬ್ಬ ತಾನು ಹಿಡಿದ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲು ತೆಗೆದುಕೊಂಡು ಬೈಕಿನಲ್ಲಿ ಹೋಗುವಾಗಲೇ ಅದು ಕಚ್ಚಿದ್ದು, ಇದರ ಪರಿಣಾಮವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಆಘಾತಕಾರಿ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ನಡೆದಿದ್ದು, ಮನೀಶ್ ಎಂಬ ಉರಗತಜ್ಞ ತನ್ನ ಸ್ನೇಹಿತನ ಜೊತೆ ಕಾಳಿಂಗ ಸರ್ಪವನ್ನು ಕೈನಲ್ಲಿ ಹಿಡಿದುಕೊಂಡು ಬೈಕಿನಲ್ಲಿ ಹೋಗುತ್ತಿದ್ದ. ಈ ವೇಳೆ ಅದು ಏಕಾಏಕಿ ಮನೀಶ್ ಗೆ ಕಚ್ಚಿದೆ.
ಇದರಿಂದ ಗಾಬರಿಗೊಂಡ ಆತನ ಸ್ನೇಹಿತ ಬೈಕ್ ನಿಲ್ಲಿಸಲು ಮುಂದಾಗಿದ್ದು, ಅಷ್ಟರೊಳಗಾಗಿ ಮನೀಶ್ ಗೆ ವಿಷ ಏರಿದ್ದ ಪರಿಣಾಮ ಆತ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರೊಳಗಾಗಿ ಮೃತಪಟ್ಟಿದ್ದ ಎನ್ನಲಾಗಿದೆ. ಈ ಅಘಾತಕಾರಿ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
https://twitter.com/sirajnoorani/status/1705505256485105909?ref_src=twsrc%5Etfw%7Ctwcamp%5Etweetembed%7Ctwterm%5E1705505256485105909%7Ctwgr%5E08128496201172ddedd970cd0f434ae8666a1014%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fcobraattackinmpmandiesofsnakebiteonmovingbikeinindoreshockingvideosurfaces-newsid-n540450270