ವಾಹನ ಸವಾರರಿಗೆ ಶಾಕ್: CNG ದರ ಕೆಜಿಗೆ 6 ರೂ.ವರೆಗೆ ಏರಿಕೆ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರ ದೇಶೀಯವಾಗಿ ಉತ್ಪಾದಿಸುವ ಸಿ.ಎನ್.ಜಿ. ಪೂರೈಕೆಯನ್ನು ಶೇಕಡ 20ರಷ್ಟು ಕಡಿತಗೊಳಿಸಿದೆ. ಇನ್ನು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿಲ್ಲ. ಹೀಗಾಗಿ ವಾಹನಗಳಿಗೆ ಬಳಕೆ ಮಾಡುವ ಸಿ.ಎನ್.ಜಿ. ದರ ಕೆಜಿಗೆ 4ರಿಂದ 6 ರೂಪಾಯಿ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.

ಇತ್ತೀಚೆಗೆ ಕಾರ್, ಆಟೋ ಸೇರಿ ವಿವಿಧ ವಾಹನಗಳಿಗೆ ಸಿಎನ್‌ಜಿ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ಬಳಕೆದಾರರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಅರಬ್ಬಿ ಸಮುದ್ರದಿಂದ ಬಂಗಾಳಕೊಲ್ಲಿಯವರೆಗೆ ಸಮುದ್ರದ ತಳದಿಂದ ಕಚ್ಚಾ ನೈಸರ್ಗಿಕ ಅನಿಲವನ್ನು ಹೊರತೆಗೆದು ಇದನ್ನು ಸಾಂದ್ರಿಕೃತ ನೈಸರ್ಗಿಕ ಅನಿಲ(ಸಿ.ಎನ್.ಜಿ.)ಆಗಿ ಪರಿವರ್ತಿಸಿ ವಾಹನಗಳು ಮತ್ತು ಕೊಳವೆಯ ಮೂಲಕ ಅಡುಗೆ ಮನೆಗಳಿಗೆ(PNG) ಅನಿಲ ಪೂರೈಸಲಾಗುತ್ತದೆ.

ಸರ್ಕಾರ ಸಿ.ಎನ್.ಜಿ. ಉತ್ಪಾದನೆ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದು, ನಗರ ಪ್ರದೇಶದ ಚಿಲ್ಲರೆ ಮಾರಾಟಗಾರರಿಗೆ ನೇರವಾಗಿ ಪೂರೈಕೆ ಮಾಡುತ್ತದೆ. ಅನಿಲ ಉತ್ಪಾದನೆ ಕುಸಿತದಿಂದ ನಗರ ಪ್ರದೇಶಕ್ಕೆ ಪೂರೈಕೆ ಮಾಡುವ ಅನಿಲ ಪೂರೈಕೆಯನ್ನು ಸರ್ಕಾರ ಕಡಿತಗೊಳಿಸಿದೆ.

ಪ್ರಸ್ತುತ ಕೇಂದ್ರ ಸರ್ಕಾರ ಸಿ.ಎನ್.ಜಿ. ಮೇಲೆ ಶೇಕಡ 14ರಷ್ಟು ಅಬಕಾರಿ ಸುಂಕ ವಿಧಿಸುತ್ತಿದೆ. ಇದರಿಂದ ಪ್ರತಿ ಕೆಜಿಗೆ 14ರಿಂದ 15 ರೂಪಾಯಿ ದರ ಹೆಚ್ಚಳವಾಗಿದ್ದು, ಒಂದು ವೇಳೆ ಸುಂಕ ಕಡಿತಗೊಳಿಸಿದರೆ ಗ್ರಾಹಕರಿಗೆ ಅನುಕೂಲವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read