ಗುಡ್ ನ್ಯೂಸ್: ಅಡುಗೆ ಅನಿಲ ಬೆಲೆ ಇಳಿಕೆ; ದೆಹಲಿಯಲ್ಲಿ CNG, ಪೈಪ್ಡ್ ಅಡುಗೆ ಅನಿಲದ ಬೆಲೆ 6 ರೂ.ವರೆಗೆ ಕಡಿತ

ನವದೆಹಲಿ: ನೈಸರ್ಗಿಕ ಅನಿಲದ ಬೆಲೆ ಸೂತ್ರವನ್ನು ಸರ್ಕಾರ ಬದಲಾಯಿಸಿದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಶನಿವಾರದಂದು ಸಿಎನ್‌ಜಿ ಮತ್ತು ಪೈಪ್ಡ್ ಅಡುಗೆ ಅನಿಲದ ಬೆಲೆಗಳನ್ನು 6 ರೂ.ವರೆಗೆ ಕಡಿತಗೊಳಿಸಲಾಗಿದೆ.

ದೆಹಲಿಯಲ್ಲಿ CNG ಇದೀಗ ಪ್ರತಿ ಕೆಜಿಗೆ 79.56 ರೂ.ನಿಂದ 73.59 ರೂ.ಗೆ ಕಡಿಮೆಯಾಗಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್(IGL) ನಗರದಲ್ಲಿ CNG ಮತ್ತು ಪೈಪ್ಡ್ ಅಡುಗೆ ಅನಿಲವನ್ನು ಪೂರೈಕೆ ಮಾಡುವ ಸಂಸ್ಥೆಯಾಗಿದೆ.

ಪೈಪ್ಡ್ ನ್ಯಾಚುರಲ್ ಗ್ಯಾಸ್(ಪಿಎನ್‌ಜಿ) ಎಂದು ಕರೆಯಲ್ಪಡುವ ಮನೆಯ ಅಡುಗೆಮನೆಗಳಿಗೆ ಪೈಪ್‌ಲೈನ್‌ನಲ್ಲಿ ಗ್ಯಾಸ್ ದರವನ್ನು ದೆಹಲಿಯಲ್ಲಿ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ 53.59 ರೂ.ನಿಂದ 48.59 ರೂ.ಗೆ ಇಳಿಸಲಾಗಿದೆ ಎಂದು ಐಜಿಎಲ್ ತಿಳಿಸಿದೆ.

ಏಪ್ರಿಲ್ 2021 ಮತ್ತು ಡಿಸೆಂಬರ್ 2022 ರ ನಡುವೆ CNG ಬೆಲೆಗಳನ್ನು 15 ಸಂದರ್ಭಗಳಲ್ಲಿ ಹೆಚ್ಚಿಸಲಾಗಿದೆ. ಏಪ್ರಿಲ್ 2021 ರಿಂದ, CNG ಬೆಲೆಗಳು ಪ್ರತಿ ಕೆಜಿಗೆ 36.16 ರೂ. ಅಥವಾ 83 ಪ್ರತಿಶತದಷ್ಟು ಹೆಚ್ಚಾಗಿದೆ.

ಅದೇ ರೀತಿ, PNG ದರಗಳು ಆಗಸ್ಟ್ 7, 2021 ಮತ್ತು ಅಕ್ಟೋಬರ್ 8, 2022 ರ ನಡುವೆ 10 ಪಟ್ಟು ಹೆಚ್ಚಾಗಿದೆ.

ಅದಾನಿ ಟೋಟಲ್ ಗ್ಯಾಸ್ ಸಿಎನ್‌ಜಿ ಬೆಲೆಯನ್ನು ಕೆಜಿಗೆ 8.13 ರೂ ಕಡಿತಗೊಳಿಸಿದೆ, ಬದಲಾವಣೆಗಳು ಇಂದು ಜಾರಿಗೆ ಬಂದಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read