ಬೆಂಗಳೂರು : ನರ್ಸಿಂಗ್ ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಕ್ಲಿನಿಕಲ್ ಸೌಲಭ್ಯ’ ನೀಡುವ ಕುರಿತು ಸರ್ಕಾರ ಮಾರ್ಗಸೂಚಿ ಆದೇಶ ಬಿಡುಗಡೆ ಮಾಡಿದೆ.
ಏನಿದೆ ಆದೇಶದಲ್ಲಿ..?
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಸಾಮಾನ್ಯ ಷರತ್ತುಗಳೊಂದಿಗೆ ಈ ಕೆಳಕಂಡ ಮಾರ್ಗಸೂಚಿಯನ್ವಯ ಪರಿಶೀಲಿಸಿ ಖಾಸಗಿ ನರ್ಸಿಂಗ್ ಶಾಲೆ ಹಾಗೂ ನರ್ಸಿಂಗ್ ಕಾಲೇಜು ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 6 ತಿಂಗಳ ಅವಧಿಗೆ ಕ್ಲಿನಿಕಲ್ ಸೌಲಭ್ಯಗಳನ್ನು ಒದಗಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಆದೇಶಿಸಲಾಗಿದೆ.
ಶೈಕ್ಷಣಿಕ ಸೌಲಭ್ಯಗಳನ್ನು ಹೊಂದಿರುವ ಕಾಲೇಜುಗಳಿಗೆ ಮಾತ್ರ ಕ್ಲಿನಿಕಲ್ ಸೌಲಭ್ಯಗಳನ್ನು ಒದಗಿಸಲು ಅನುಮತಿ ನೀಡಲಾಗುವುದು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಸೌಲಭ್ಯಗಳನ್ನು ಪಡೆಯಲು ಆಸಕ್ತಿ ಹೊಂದಿರುವ ಕಾಲೇಜುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಕಠಿಣ ಮೌಲ್ಯಮಾಪನ ಮಾನದಂಡಗಳನ್ನು ಪೂರೈಸುವ ಕಾಲೇಜುಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.
6 ತಿಂಗಳ ನಿರಂತರ ఇంటినాFలి. ಸೇರಿದಂತೆ ಸಂಪೂರ್ಣ ಕೋರ್ಸ್ ಗೆ ಬದ್ಧವಾಗಿರುವ ಕಾಲೇಜುಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ವಿದ್ಯಾರ್ಥಿ ಗಳಿಗೆ ಕೌಶಲ್ಯವಾರು, ತಿಂಗಳವಾರು ತರಬೇತಿಯ ಸಂಪೂರ್ಣ ಮಾಸ್ಟರ್ ಪ್ಲಾನ್ ಅನ್ನು ಸಹ ಅವರು ಒದಗಿಸಬೇಕು.
ಕಾಲೇಜುಗಳು ಆಸ್ಪತ್ರೆಯ 30 ಕಿ.ಮೀ. ಭೌಗೋಳಿಕ ಮಿತಿಯಲ್ಲಿರಬೇಕು. ಆಸ್ಪತ್ರೆಯಲ್ಲಿ ಕ್ಲಿನಿಕಲ್ ಕೋಆರ್ಡಿನೇಟರ್ ಒಬ್ಬರನ್ನು ನೇಮಿಸಬಹುದು. ಇವರು ಎಂ.ಎಸ್ಸಿ ಪದವಿ ಹೊಂದಿರುವ ಹಿರಿಯ ಖಾಯಂ ನರ್ಸ್ ಆಗಿರಬಹುದು ಅಥವಾ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕದ ಮೂಲಕ ನೇಮಕಗೊಂಡ ಗುತ್ತಿಗೆ ಸಿಬ್ಬಂದಿಯಾಗಿರಬಹುದು. ಈ ಕ್ಲಿನಿಕಲ್ ಕೋಆರ್ಡಿನೇಟರ್ ಆಸ್ಪತ್ರೆಯ ಖಾಯಂ ನರ್ಸ್ ಗಳಿಗೆ ಕೌಶಲ್ಯ ಉನ್ನತೀಕರಣಕ್ಕೆ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸಬಹುದು ಎಂದು ತಿಳಿಸಿದೆ.
ಜಿಲ್ಲೆಯ ಕ್ಲಿನಿಕಲ್ ಸೌಲಭ್ಯಗಳ ಕಾರ್ಯಕ್ರಮದ ಒಟ್ಟಾರೆ ಮೇಲ್ವಿಚಾರಣೆಯ ಜವಾಬ್ದಾರಿ ಯನ್ನು ಜಿಲ್ಲಾ ನರ್ಸ್ಗೆ ನೀಡಬಹುದು. ಪ್ರತಿ 10 ವಿದ್ಯಾರ್ಥಿಗಳಿಗೆ ಜೊತೆಯಲ್ಲಿರಬೇಕು. ನರ್ಸಿಂಗ್ ಕಾಲೇಜಿನಿಂದ ಕನಿಷ್ಠ ಒಬ್ಬ ಶಿಕ್ಷಕರು
ಆಸ್ಪತ್ರೆಯ ಒಬ್ಬ ಹಿರಿಯ ನರ್ಸ್ ಪ್ರತಿ 10 ವಿದ್ಯಾರ್ಥಿಗಳನ್ನು ಮೇಲ್ವಿಚಾರಣೆ ಮಾಡಬೇಕು ಎಂದು ತಿಳಿಸಿದೆ.

