ವಿದ್ಯಾರ್ಥಿನಿಯರ ಜೊತೆ ಪ್ರಾಧ್ಯಾಪಕಿಯರ ಬಿಂದಾಸ್ ಡಾನ್ಸ್: ’ಪಠಾಣ್’ ಸಿನೆಮಾದ ನೃತ್ಯಕ್ಕೆ ನೆಟ್ಟಿಗರು ಫುಲ್ ಫಿದಾ

ನಟ ಶಾರುಖ್‌ಖಾನ್‌ ಹಾಗೂ ನಟಿ ದೀಪಿಕಾ ಪಡುಕೋಣೆ ಅಭಿನಯದ ’ಪಠಾಣ್ ’ ಸಿನೆಮಾ ಈ ವರುಷದ ಸೂಪರ್ ಡೂಪರ್ ಹಿಟ್ ಸಿನೆಮಾಗಳಲ್ಲಿ ಒಂದು. ಇದೇ ಸಿನೆಮಾದ ಟೈಟಲ್ ಟ್ರಾಕ್‌ ಗೆ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಬಿಂದಾಸ್ ಡಾನ್ಸ್ ಗೆ ಎಲ್ಲರೂ ಫಿದಾ ಆಗ್ಹೋಗಿದ್ದರು. ಈಗ ಇದೇ ಡಾನ್ಸ್‌ಗೆ ಇಲ್ಲಿ ಸೀರೆಯುಟ್ಟ ನಾರಿಯರು ಡಾನ್ಸ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ದೆಹಲಿಯ ಜೀಸಸ್ ಅಂಡ್ ಮೇರಿ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿನಿಯರು ʼಪಠಾಣ್ʼ ಸಿನೆಮಾದ ‘ಝೂಮೆ ಜೋ ಪಠಾಣ್’ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಇದೇ ವಿದ್ಯಾರ್ಥಿನಿಯರಿಗೆ ಸಾಥ್ ಕೊಟ್ಟಿದ್ದಾರೆ ಮಹಿಳಾ ಪ್ರಾಧ್ಯಾಪಕಿಯರು. ಸೀರೆಯುಟ್ಟ ಪ್ರಾಧ್ಯಾಪಕಿಯರು ವಿದ್ಯಾರ್ಥಿನಿಯರನ್ನೇ ಮೀರಿಸುವ ಹಾಗೆ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಾಣಿಜ್ಯ ವಿಭಾಗದಿಂದಲೇ ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದಕ್ಕೆ ಶೀರ್ಷಿಕೆಯಲ್ಲಿ ಜೀಸಸ್ ಅಂಡ್ ಮೇರಿ ಕಾಲೇಜ್‌ನ ಕಾಮರ್ಸ್ ವಿಭಾಗದ ಕೂಲೆಸ್ಟ್ ಪ್ರಾಧ್ಯಾಪಕರು ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಈ ವಿಡಿಯೋವನ್ನ 1 ಮಿಲಿಯನ್‌ ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ನಮ್ಮ ಕಾಲೇಜ್ ದಿನಗಳಲ್ಲಿ ಈ ರೀತಿಯ ಪ್ರಾಧ್ಯಾಪಕರೇ ಇರಲಿಲ್ಲ ಎಂದು ಕಾಮೆಂಟ್ ಮಾಡಿ ತಮ್ಮ ದುಃಖವನ್ನ ತೋಡಿಕೊಂಡಿದ್ದಾರೆ. ಇನ್ನೂ ಕೆಲವರು ಈ ರೀತಿ ಪ್ರಾಧ್ಯಾಪಕರು ಇದ್ದರೆ ಕಾಲೇಜ್ ದಿನಗಳು ಇನ್ನಷ್ಟು ಬಂಗಾರಮಯವಾಗಿ ಬಿಡುತ್ತೆ ಎಂದು ಹೇಳಿದ್ದಾರೆ. ಈ ರೀತಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಈ ಪ್ರಾಧ್ಯಾಪಕರನ್ನ ಹಾಡಿ ಹೊಗಳಿದ್ದಾರೆ.

https://youtu.be/gQrwWwEWNhc

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read