ಸಾಮಾಜಿಕ ಜಾಲತಾಣದಲ್ಲಿ ನಾಗರಿಕ ಸೇವಾ ಅಧಿಕಾರಿಯೊಬ್ಬರು ಹಾಕಿರುವ ಪೋಸ್ಟ್ ಫುಲ್ ವೈರಲ್ ಆಗಿದೆ. ಅತ್ಯಂತ ಕಡುಬಡತನದಲ್ಲಿ ಬೆಳೆದು ಬಂದ ತಾವು ಇದರ ಮಧ್ಯೆಯೂ ಉನ್ನತ ಶಿಕ್ಷಣ ಪಡೆದ ಕಾರಣಕ್ಕೆ ಗುಡಿಸಿಲಿನ ಮನೆಯಿಂದ ಇಂದು ಐಶಾರಾಮಿ ಮನೆಯಲ್ಲಿ ವಾಸಿಸಲು ಕಾರಣವಾಗಿದೆ ಎಂದಿದ್ದಾರೆ.
ನಾಗಾಲ್ಯಾಂಡ್ ಮುಖ್ಯಮಂತ್ರಿಗಳ ಕಚೇರಿಯ ವಿಶೇಷ ಅಧಿಕಾರಿ ಬಿ. ನೆಲಯ್ಯಾಪ್ಪನ್ ಈ ಒಂದು ಪೋಸ್ಟ್ ಹಾಕಿದ್ದು, ಇದರಲ್ಲಿ ತಾವು ಈ ಮೊದಲು ವಾಸವಾಗಿದ್ದ ಮನೆ ಹಾಗೂ ಈಗ ವಾಸಿಸುತ್ತಿರುವ ಮನೆಯ ಫೋಟೋದ ಜೊತೆಗೆ ನನ್ನ ಇಂದಿನ ಈ ಜೀವನಕ್ಕೆ ಶಿಕ್ಷಣವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಗುಡಿಸಿಲಿನಂತಹ ಮನೆಯಲ್ಲಿ ನನ್ನ ಪೋಷಕರು ಹಾಗೂ ನಾಲ್ಕು ಮಂದಿ ಒಡಹುಟ್ಟಿದವರ ಜೊತೆ ನನಗೆ 30 ವರ್ಷ ಆಗುವವರೆಗೂ ಜೀವನ ನಡೆಸಿದ್ದೆ. ಶಿಕ್ಷಣ, ಕಠಿಣ ಪರಿಶ್ರಮದ ಕಾರಣಕ್ಕೆ ಇಂದು ಈ ಹಂತ ತಲುಪಿದ್ದೇನೆ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದು, ನೆಟ್ಟಿಗ ಸಮುದಾಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
https://twitter.com/nellayappan/status/1699313378110685263?ref_src=twsrc%5Etfw%7Ctwcamp%5Etweetembed%7Ctwterm%5E1699313378110685263%7Ctwgr%5Ed90b50e13a361e2305fdab6fd9d90f0c0071eeb5%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Ftheindianexpress-epaper-dh45fdd5a8110244f1a752805dfc5bb160%2Fcivilservantshowshisprogressfromoneroomthatchedhousetosprawlingbungalow-newsid-n535555476