ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿಡಿಯೋ ವೈರಲ್ ಆಗ್ತಿರುತ್ತದೆ. ಈಗ ಮಹಿಳೆಯೊಬ್ಬಳು, ವೃದ್ಧ ಟ್ಯಾಕ್ಸಿ ಡ್ರೈವರ್ ಮೇಲೆ ಕೂಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಘಟನೆ ಮುಂಬೈನಲ್ಲಿ ನಡೆದಿದೆ. ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಮೊದಲು ಅರಣ್ಯ ಚಟರ್ಜಿ ಎನ್ನುವವರು ಲಿಂಕ್ಡ್ ಇನ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದರು. ನಂತ್ರ ಅದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಆಗಿದೆ. ವೈರಲ್ ವಿಡಿಯೋದಲ್ಲಿ ಟ್ಯಾಕ್ಸಿ ಡ್ರೈವರ್ ಹಾಗೂ ಮಹಿಳೆಯನ್ನು ನೀವು ನೋಡ್ಬಹುದು. ಮಹಿಳೆ, ವೃದ್ಧ ಟ್ಯಾಕ್ಸಿ ಚಾಲಕನ ಮೇಲೆ ಕೂಗಾಡುತ್ತಿದ್ದಾಳೆ. ಕಾರಿನ ಕಿಟಕಿಯಿಂದ ಲಗೇಜ್ ಹೊರಗೆ ಹಾಕುವ ಮಹಿಳೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾಳೆ. ಈ ವಿಡಿಯೋ ನೋಡಿದ ಜನರು, ಮಹಿಳೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರಾದ್ರೂ ವಕೀಲರು ಈಕೆ ವಿರುದ್ಧ ದೂರು ದಾಖಲಿಸಿ ಎಂದು ಒಬ್ಬರು ಬರೆದ್ರೆ, ಇನ್ನೊಬ್ಬರು ಸಮಾಜ ಮತ್ತು ಮಾನವೀಯತೆ ಎರಡೂ ಇಲ್ಲಿ ವಿಫಲವಾಗಿವೆ. ಪ್ರತಿದಿನ ಹೊಸ ನಾಟಕವನ್ನು ವೀಕ್ಷಿಸುತ್ತಿದ್ದೇವೆ ಎಂದು ಬರೆದಿದ್ದಾರೆ. ಈ ಘಟನೆಯು ಈಗ ಪ್ರಯಾಣಿಕರು ಮತ್ತು ಚಾಲಕರ ಗೌರವ, ಸೌಜನ್ಯ ಮತ್ತು ಜವಾಬ್ದಾರಿಗಳ ಬಗ್ಗೆ ವ್ಯಾಪಕವಾದ ಸಂಭಾಷಣೆಯನ್ನು ಹುಟ್ಟುಹಾಕಿದೆ.
https://twitter.com/ShoneeKapoor/status/1811023649694007316?ref_src=twsrc%5Etfw%7Ctwcamp%5Etweetembed%7Ctwterm%5E1811023649694007316%7Ctwgr%5Ebe058592a2fcc35096ee048a2fb08ea3a70a735f%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fchu-hai-kya-b-woman-caught-on-camera-threatening-elderly-taxi-driver-of-molestation-case-in-mumbai