‘ಗಡಿ’ ದಾಟಿದ ಮತ್ತೊಂದು ಪ್ರೇಮ ಪ್ರಕರಣ; ಪಾಕಿಸ್ತಾನದ ಪ್ರಿಯಕರನನ್ನು ಮದುವೆಯಾಗಲು ಇಸ್ಲಾಂ ಗೆ ಮತಾಂತರವಾದ ಚೀನಾ ಯುವತಿ…!

ಭಾರತದ ಯುವಕನನ್ನು ಮದುವೆಯಾಗಲು ಇತ್ತೀಚೆಗೆ ಪಾಕಿಸ್ತಾನದ ವಿವಾಹಿತ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಅಕ್ರಮವಾಗಿ ಗಡಿ ದಾಟಿ ಭಾರತಕ್ಕೆ ಬಂದಿದ್ದು, ಇದಾದ ಬಳಿಕ ಭಾರತದ ವಿವಾಹಿತ ಮಹಿಳೆ ಪಾಕ್ ವ್ಯಕ್ತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿದ್ದ ಘಟನೆ ನಡೆದಿತ್ತು. ಇದೀಗ ಮತ್ತೊಂದು ಇಂಥವುದೇ ಪ್ರೇಮ ಪ್ರಕರಣ ವರದಿಯಾಗಿದ್ದು, ಆನ್ಲೈನ್ ಮೂಲಕ ಪರಿಚಿತನಾಗಿದ್ದ ಪಾಕಿಸ್ತಾನದ ಯುವಕನನ್ನು ಮದುವೆಯಾಗಲು ಚೀನಾ ಯುವತಿ ಅಲ್ಲಿಗೆ ತೆರಳಿದ್ದಾಳೆ.

ಚೀನಾದ 21 ವರ್ಷದ Gao Feng ಎಂಬ ಯುವತಿ ಮೂರು ವರ್ಷಗಳ ಹಿಂದೆ ಸ್ನ್ಯಾಪ್ ಚಾಟ್ ಮೂಲಕ ಪಾಕಿಸ್ತಾನದ 18 ವರ್ಷದ ಜಾವೇದ್ ಎಂಬಾತನೊಂದಿಗೆ ಪರಿಚಿತಳಾಗಿದ್ದಳು. ಬಳಿಕ ಇವರಿಬ್ಬರು ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದು, ಇದೀಗ Gao Feng ರಸ್ತೆ ಮಾರ್ಗವಾಗಿ ಅಫ್ಘಾನಿಸ್ತಾನದ ಗಡಿಗೆ ಹಂಚಿಕೊಂಡಿರುವ ಬಜೌರ್ ಜಿಲ್ಲೆಗೆ ತೆರಳಿದ್ದಾಳೆ. ಸುರಕ್ಷತೆ ದೃಷ್ಟಿಯಿಂದ ಜಾವಿದ್ ಆಕೆಯನ್ನು ತನ್ನ ಚಿಕ್ಕಪ್ಪನ ಊರಾದ ಸಮರ್ಭಾಗ್ ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅವರಿಬ್ಬರು ಮದುವೆಯಾಗಿದ್ದಾರೆ.

ಇಸ್ಲಾಂ ಗೆ ಮತಾಂತರವಾಗಿರುವ Gao Feng ಈಗ ತನ್ನ ಹೆಸರನ್ನು ಕಿಸ್ವಾ ಎಂದು ಬದಲಾಯಿಸಿಕೊಂಡಿದ್ದು, ಇವರಿಬ್ಬರನ್ನು ಈಗ ಪೊಲೀಸರು ಇಸ್ಲಾಮಾಬಾದಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದಾರೆ. ಚೀನಾ ಯುವತಿಯ ದಾಖಲೆ ಪತ್ರಗಳು ಸಮರ್ಪಕವಾಗಿವೆ ಎಂದು ಪೊಲೀಸರು ತಿಳಿಸಿದ್ದು, ಮುಂದಿನ ದಿನಗಳಲ್ಲಿ ಇವರಿಬ್ಬರು ಚೀನಾದಲ್ಲಿ ಕೋರ್ಟ್ ಮ್ಯಾರೇಜ್ ಆಗಲು ನಿರ್ಧರಿಸಿದ್ದಾರೆ.

ಕೆಲ ದಿನಗಳಲ್ಲಿ ಕಿಸ್ವಾ ಚೀನಾಗೆ ವಾಪಸ್ ಹೋಗಲಿದ್ದು, ಪ್ರಸ್ತುತ ಬಜೌರ್ ಜಿಲ್ಲೆಯ ಪದವಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಾಂಗ ಮಾಡುತ್ತಿರುವ ಜಾವೇದ್ ತನ್ನ ವಿದ್ಯಾಭ್ಯಾಸ ಮುಗಿದ ಬಳಿಕ ಚೀನಾಗೆ ತೆರಳಿ ಅಲ್ಲಿ ಕಾನೂನು ಬದ್ಧವಾಗಿ ಕೋರ್ಟ್ ಮ್ಯಾರೇಜ್ ಮಾಡಿಕೊಳ್ಳಲಿದ್ದಾನೆ ಎಂದು ತಿಳಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read