ಒಂದೇ ಕಟ್ಟಡದಲ್ಲಿ ಪತ್ನಿ – ನಾಲ್ವರು ಪ್ರೇಯಸಿಯರೊಂದಿಗೆ ವಾಸ; ಐವರು ಮಹಿಳೆಯರಿಗೂ ಅರಿವೇ ಇರಲಿಲ್ಲ ಈತನ ವಂಚನೆ…!

ಒಂದು ಸಂಬಂಧವನ್ನು ಕಾಪಾಡಿಕೊಳ್ಳುವುದೇ ಕಠಿಣವಾಗಿರುವ ಇಂದಿನ ದಿನಮಾನಗಳಲ್ಲಿ, ಚೀನಾದ ವಿವಾಹಿತ ವ್ಯಕ್ತಿಯೊಬ್ಬ ಒಂದೇ ವಸತಿ ಸಂಕೀರ್ಣದಲ್ಲಿ ತನ್ನ ಪತ್ನಿ ಮತ್ತು ನಾಲ್ವರು ಪ್ರೇಯಸಿಯರೊಂದಿಗೆ ವಾಸಿಸುತ್ತಿದ್ದು, ಇದೀಗ ಸಂಗತಿ ಬಯಲಾದ ಬಳಿಕ ಎಲ್ಲರೂ ದಂಗಾಗಿದ್ದಾರೆ..

ಅಚ್ಚರಿಯ ಸಂಗತಿಯೆಂದರೆ, ಈ ಮಹಿಳೆಯರಲ್ಲಿ ಒಬ್ಬಾಕೆ ಆತನ ಪತ್ನಿಯಂತೆ ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದು, ಇತರ ನಾಲ್ವರು ಪ್ರೇಯಸಿಯರಾಗಿದ್ದರು. ನಾಲ್ಕು ವರ್ಷಗಳ ಕಾಲ ಈ ಮಹಿಳೆಯರಿಗೆ ವಿಷಯದ ಅರಿವೇ ಇರಲಿಲ್ಲ. ಈ ಸ್ಟೋರಿ ಈಗ ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇಷ್ಟು ದಿನಗಳ ಕಾಲ ಇಂತಹ ಮಹಾ ಮೋಸದ ಸಂಬಂಧ ಅದೇಗೆ ಬಯಲಾಗದಂತೆ ಈತ ಕಾಪಾಡಿಕೊಂಡ ಎಂಬುದನ್ನು ಚರ್ಚಿಸುತ್ತಿದ್ದಾರೆ.

ಕ್ಸಿಯೋಜುನ್ ಎಂಬ ಹೆಸರಿನ ಈ ವ್ಯಕ್ತಿ ಈಶಾನ್ಯ ಚೀನಾದ ಜಿಲಿನ್ ಪ್ರಾಂತ್ಯದಿಂದ ಬಂದವನಾಗಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದ ಈತ ಮೊದಲು ಓರ್ವಳೊಂದಿಗೆ ಸಂಬಂಧ ಹೊಂದಿದ್ದು, ಆಕೆ ಗರ್ಭಿಣಿಯಾದ ಬಳಿಕ ವಿವಾಹ ಮಾಡಿಕೊಂಡಿದ್ದ. ಈತನ ಐಷಾರಾಮಿ ಜೀವನದ  ಪರಿಣಾಮ ಹಣಕಾಸು ಅಡಚಣೆ ಎದುರಾಗಿದ್ದು, ಹೀಗಾಗಿ ಆತನ ಪತ್ನಿ ವಿಚ್ಛೇದನವನ್ನು ಆಯ್ಕೆ ಮಾಡುವ ಬದಲು, ತಮ್ಮ ಮಗುವನ್ನು ಒಂಟಿಯಾಗಿ ಬೆಳೆಸಲು ನಿರ್ಧರಿಸಿದ್ದರು.

ಇದರ ಮಧ್ಯೆ ಕ್ಸಿಯಾಜುನ್, ಆನ್‌ಲೈನ್‌ನಲ್ಲಿ ಭೇಟಿಯಾದ ಕ್ಸಿಯಾಹೋಂಗ್‌ ಜೊತೆ ಸಂಬಂಧ ಬೆಳೆಸಿದ್ದು, ಸುಳ್ಳು ನೆಪದಲ್ಲಿ ಆಕೆಯಿಂದ 140,000 ಯುವಾನ್‌ಗಳ ಭಾರಿ ಮೊತ್ತವನ್ನು ಪಡೆದು ಅವಳೊಂದಿಗೆ ಫ್ಲಾಟ್‌ ನಲ್ಲಿ ವಾಸಿಸುತ್ತಿದ್ದ. ಆದರೂ ಆತನ ಮೋಸ ನಿಂತಿರಲಿಲ್ಲ. Xiaojun ಮೂರು ಇತರ ಮಹಿಳೆಯರೊಂದಿಗೆ ತನ್ನ ಸಂಬಂಧವನ್ನು ಮುಂದುವರೆಸಿದ್ದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರಾದ Xiaomin ಮತ್ತು Xiaoxin, ಮತ್ತು ನರ್ಸ್ Xiaolan ಇವರೊಂದಿಗೂ ಪ್ರೀತಿಯ ನಾಟಕವಾಡಿ ಅವರ ಹಣದಿಂದಲೇ ಅದೇ ವಸತಿ ಸಮುಚ್ಚಯದ ಬೇರೆ ಬೇರೆ ಫ್ಲಾಟ್‌ ಗಳಲ್ಲಿ ವಾಸ ಆರಂಭಿಸಿದ್ದ.

ಸತ್ಯ ಬಹಿರಂಗವಾಯಿತು

ಅಂತಿಮವಾಗಿ ಪರಿತ್ಯಕ್ತ ಪತ್ನಿಗೆ ಈತನ ಕುರಿತು ಅನುಮಾನ ಬಂದಿದ್ದು, ಪೊಲೀಸರಿಗೆ ದೂರು ನೀಡಿದ ಬಳಿಕ ಅಸಲಿ ವಿಚಾರ ಬಯಲಾಗಿದೆ. ಈತನಿಂದ ವಂಚನೆಗೊಳಗಾದ ಎಲ್ಲ ಮಹಿಳೆಯರೂ ಈಗ ಪರಿತಪಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read