ನಿರುದ್ಯೋಗಿ ಯುವಕನ ಹೊಸ ಟ್ರಿಕ್‌……ಇದೀಗ ಉದ್ಯೋಗಗಳ ‘ಬಂಪರ್ ಆಫರ್’

ಈಗಿನ ಕಾಲದಲ್ಲಿ ಸೂಕ್ತ ಉದ್ಯೋಗ ಹುಡುಕೋದು ಸವಾಲಿನ ಕೆಲಸ. ನಿಮಗೂ ಕೆಲಸ ಸಿಗ್ಲಿಲ್ಲ ಅಂದ್ರೆ ಚೀನಾದ ಈ ವ್ಯಕ್ತಿ ಮಾಡಿದ ಐಡಿಯಾವನ್ನು ನೀವು ಟ್ರೈ ಮಾಡ್ಬಹುದು. ಪದವಿ ಪಡೆದ ನಂತ್ರವೂ ಕೆಲಸ ಇಲ್ಲದೆ ತೊಂದರೆಯಲ್ಲಿದ್ದ ವ್ಯಕ್ತಿ ಹೊಸ ಐಡಿಯಾ ಮಾಡಿದ್ದಾನೆ. ಅದು ವರ್ಕ್‌ ಔಟ್‌ ಆಗಿದೆ. ಆ ನಂತ್ರ ಅನೇಕ ಕಂಪನಿಗಳು ಈತನಿಗೆ ಕೆಲಸ ನೀಡಲು ಮುಂದೆ ಬಂದಿವೆ.

ಈತನ ಹೆಸರು ಸಾಂಗ್ ಜಿಯಾಲೆ. ಚೀನಾ ನಿವಾಸಿ. ವಯಸ್ಸು 21 ವರ್ಷ. ಹಾನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಜಿಯೋಮ್ಯಾಟಿಕ್ಸ್‌ ಪದವಿ ಪಡೆದಿದ್ದಾನೆ. ಅನೇಕ ದಿನಗಳಿಂದ ಕೆಲಸ ಹುಡುಕ್ತಿದ್ದರೂ ಕೆಲಸ ಸಿಕ್ಕಿರಲಿಲ್ಲ. ತನ್ನ ಸೃಜನಶೀಲತೆ ಉಪಯೋಗಿಸಿ, ತನ್ನ ಟೀ ಶರ್ಟ್‌ ಮೇಲೆ ಕ್ಯೂಆರ್‌ ಕೋಡ್‌ ಮುದ್ರಿಸಿದ್ದಾನೆ. ಅದೇ ಟೀಶರ್ಟ್‌ ಧರಿಸಿ ವಾಕಿಂಗ್‌ ಹೋಗ್ತಿದ್ದವನಿಗೆ ಕೊನೆಗೂ ಕೆಲಸ ಸಿಕ್ಕಿದೆ.

ನಾನು 2024 ರ ಬ್ಯಾಚ್‌ ನವನು. ನನ್ನ ಸಿವಿಯನ್ನು ಹಿಂದೆ ನೋಡಿ ಎಂದು ಟೀಶರ್ಟ್‌ ಮುಂದೆ ಬರೆದಿದ್ದ. ಟೀಶರ್ಟ್‌ ಹಿಂದೆ ಕ್ಯೂಆರ್‌ ಕೋಡ್‌ ಹಾಕಿಕೊಂಡಿದ್ದ. ಅದನ್ನು ನೋಡಿದ ಅನೇಕರು ಈತನ ಬುದ್ಧಿವಂತಿಕೆಗೆ ಮೆಚ್ಚಿ ಕೆಲಸದ ಆಫರ್‌ ನೀಡಿದ್ದರು. ಈಗ ಆತ ಉಡುಪು ತಯಾರಿಕಾ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read