ಇಲ್ಲಿ ಮಹಿಳೆಯರಿಗಿಂತ ಹೆಚ್ಚು ಮೇಕಪ್ ಮಾಡಿಕೊಳ್ತಿದ್ದಾರೆ ಪುರುಷರು…!

ಮೇಕಪ್‌ ಎಂದಾಗ ನಮಗೆ ನೆನಪಾಗೋದು ಮಹಿಳೆಯರು. ಆದ್ರೆ ಕಾಲ ಬದಲಾಗಿದೆ. ಮೇಕಪ್‌ ಹಾಗೂ ಮೇಕ್‌ ಓವರ್‌ ನಲ್ಲಿ ಪುರುಷರು ಮುಂದಿದ್ದಾರೆ. ಚೀನಾ ಈ ವಿಷ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಅಂದ್ರೆ ತಪ್ಪಾಗೋದಿಲ್ಲ. ಚೀನಾದಲ್ಲಿ ಯುವಕರ ಆಲೋಚನೆ ಬದಲಾಗಿದೆ. ದಿನ ದಿನಕ್ಕೂ ಮೇಕಪ್‌ ಮಾಡಿಸಿಕೊಳ್ಳುವ ಯುವಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರ್ತಿದೆ.

ತಾವು ನೋಡೋಕೆ ಹೇಗೆ ಕಾಣ್ತಿದ್ದೇವೆ ಎನ್ನುವುದನ್ನು ಚೀನಾ ಯುವಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದೇ ಕಾರಣಕ್ಕೆ ಡೇಟ್‌ ಹೋಗುವ ಮೊದಲು ಅವರು ಮೇಕಪ್‌ ಮಾಡಿಕೊಳ್ತಾರೆ. ಲೂನಾರ್‌ ನ್ಯೂ ಇಯರ್‌ ವೇಳೆ ಬ್ಲೈಂಡ್‌ ಡೇಟ್‌ ಮಾಡಿದ್ರೆ ಒಳ್ಳೆಯದು ಎಂಬ ನಂಬಿಕೆ ಇದೆ. ಹಾಗಾಗಿ ಈ ತಿಂಗಳು ಮೇಕಪ್‌ ಮಾಡಿಕೊಳ್ಳುವ ಯುವಕರ ಸಂಖ್ಯೆ ಹೆಚ್ಚಾಗುತ್ತದೆ. ಕೇವಲ ಸಮಾಲೋಚನೆಗಾಗಿಯೇ ಮೇಕಪ್‌ ಆರ್ಟಿಸ್ಟ್‌ ಗೆ 200 ಯುಯಾನ್ ಅಂದರೆ 2300 ರೂಪಾಯಿ ಶುಲ್ಕ ಪಾವತಿ ಮಾಡ್ತಿದ್ದಾರೆ. ವಿಶೇಷ ಅಂದ್ರೆ ಚೀನಾದ ಹಳ್ಳಿಯ ಜನರೇ ಹೆಚ್ಚು ಮೇಕಪ್‌ ಮಾಡಿಕೊಳ್ತಿದ್ದಾರೆ.

ವಿಶೇಷವಾಗಿ ಜಿಯಾಂಗ್ಸಿ ಪ್ರಾಂತ್ಯದಲ್ಲಿ ಮೇಕಪ್‌ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಇಲ್ಲಿನ ಮನೆ ಹಿರಿಯರು ಒಂಟಿ ಯುವಕರಿಗೆ ಬ್ಲೈಂಡ್‌ ಡೇಟ್‌ ಫಿಕ್ಸ್‌ ಮಾಡ್ತಾರೆ. 2018 ರಲ್ಲಿ ಚೀನಾದಲ್ಲಿ 240 ಮಿಲಿಯನ್ ಒಂಟಿ ಜನರಿದ್ದಾರೆ ಎಂದು ರಾಷ್ಟ್ರೀಯ ಅಂಕಿಅಂಶ ಹೇಳಿದೆ. 2022 ರಲ್ಲಿ ಮದುವೆಯಾಗುವವರ ಸಂಖ್ಯೆ 6.83 ಮಿಲಿಯನ್‌ಗೆ ಇಳಿದಿದೆ, 2021 ಕ್ಕಿಂತ ಸುಮಾರು 803,000ಕ್ಕಿಂತ ಕಡಿಮೆ ಜನರು ಮದುವೆ ಆಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read