ಕೊರೊನಾ ಅಬ್ಬರಕ್ಕೆ ತತ್ತರಿಸಿದ ಚೀನಾ; ಆರು ದಿನಗಳಲ್ಲಿ ಬರೋಬ್ಬರಿ 13,000 ಮಂದಿ ಸಾವು

ಇಡೀ ವಿಶ್ವಕ್ಕೆ ಕೊರೊನಾ ಮಹಾಮಾರಿಯನ್ನು ಹರಡಿಸಿದ ಕುಖ್ಯಾತಿ ಹೊಂದಿರುವ ಚೀನಾದಲ್ಲಿ ಅದರ ಆರ್ಭಟ ಇನ್ನೂ ಕಡಿಮೆಯಾಗುತ್ತಿಲ್ಲ. ಈಗ ಕಾಣಿಸಿಕೊಂಡಿರುವ ಹೊಸ ಅಲೆಗೆ ಈಗಾಗಲೇ ಸಹಸ್ರಾರು ಮಂದಿ ಬಲಿಯಾಗಿದ್ದು, ಸಾವಿನ ಸರಣಿ ಈಗಲೂ ಮುಂದುವರೆದಿದೆ.

ಈ ಮೊದಲು ಜನವರಿ 12ರ ಹೊತ್ತಿಗೆ ಆಸ್ಪತ್ರೆಗಳಲ್ಲಿ 60 ಸಾವಿರ ಮಂದಿ ಮೃತಪಟ್ಟಿದ್ದರು ಎಂದು ಹೇಳಲಾಗಿದ್ದು, ಇದೀಗ ಕಳೆದ ಒಂದು ವಾರದಲ್ಲಿ 13,000 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ. ಆಸ್ಪತ್ರೆಗಳು ಕಿಕ್ಕಿರಿದು ತುಂಬಿದ್ದು, ವೈದ್ಯಕೀಯ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ ಎನ್ನಲಾಗಿದೆ.

ಇದೀಗ ಚೀನಾದಲ್ಲಿ ಹೊಸ ವರ್ಷಾಚರಣೆ ಮಾಡಲಾಗುತ್ತಿದ್ದು, ಹೀಗಾಗಿ ಎಲ್ಲರೂ ಸಹ ತಮ್ಮ ಕುಟುಂಬಸ್ಥರೊಂದಿಗೆ ಸೇರಿಕೊಳ್ಳುತ್ತಿದ್ದಾರೆ. ಹೊಸ ವರ್ಷ ಆಚರಣೆಯ ರಜಾ ಅವಧಿಯ ವೇಳೆಗೆ ಚೀನಾದಲ್ಲಿ ಪ್ರತಿನಿತ್ಯ 36,000ಕ್ಕೂ ಅಧಿಕ ಮಂದಿ ಸಾವನ್ನಪ್ಪಬಹುದು ಎಂದು ಅಂದಾಜಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read