ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ʼಪೋಟ್ಯಾಟೋʼ ಲಾಲಿಪಾಪ್

ಬೇಕಾಗುವ ಪದಾರ್ಥಗಳು :

ಬೇಯಿಸಿದ ಆಲೂಗಡ್ಡೆ 2-3, ಹೆಚ್ಚಿಕೊಂಡ ಈರುಳ್ಳಿ 1/4 ಕಪ್, ಕೊತ್ತಂಬರಿ ಸೊಪ್ಪು, ಬ್ರೆಡ್ ಕ್ರಮ್ಸ್ 1/2 ಕಪ್, ಅಚ್ಚ ಖಾರದ ಪುಡಿ, ದನಿಯ ಪುಡಿ ಸ್ವಲ್ಪ, ಶುಂಠಿ ಬೆಳ್ಳುಳಿ ಪೇಸ್ಟ್, ನಿಂಬೆ ರಸ, ಉಪ್ಪು, ಮೈದಾ ಹಿಟ್ಟು, ಚಿಲ್ಲಿ ಫ್ಲೇಕ್ಸ್.

ಮಾಡುವ ವಿಧಾನ :

ಬೇಯಿಸಿದ ಆಲೂಗಡ್ಡೆ ಗೆ ಹೆಚ್ಚಿಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು, ಬ್ರೆಡ್ ಕ್ರಮ್ಸ್, ಅಚ್ಚ ಖಾರದ ಪುಡಿ, ದನಿಯ ಪುಡಿ, ಶುಂಠಿ ಬೆಳ್ಳುಳಿ ಪೇಸ್ಟ್, ನಿಂಬೆ ರಸ, ಉಪ್ಪು ಹಾಗೂ ಸ್ವಲ್ಪ ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಕಲೆಸಿರಿ. ನಂತರ ಅದನ್ನು ಉಂಡೆ ರೀತಿ ತಯಾರಿಸಿಕೊಳ್ಳಿ.

ಆನಂತರ ಮೈದಾ ಹಿಟ್ಟಿಗೆ ನೀರು ಹಾಕಿ ಪೇಸ್ಟ್ ಹದಕ್ಕೆ ಕಲೆಸಿಡಿ. ನಂತರ ಬ್ರೆಡ್ ಕ್ರಮ್ಸ್ ಗೆ ಚಿಲ್ಲಿ ಫ್ಲೇಕ್ಸ್ ಹಾಕಿ ಮಿಕ್ಸ್ ಮಾಡಿ ಇಡಿ. ತಯಾರಿಸಿಕೊಂಡ ಉಂಡೆಯನ್ನು ಮೈದಾ ಹಿಟ್ಟಿನ ಪೇಸ್ಟ್ ಗೆ ಅದ್ದಿ ಬ್ರೆಡ್ ಕ್ರಮ್ಸ್ ನಲ್ಲಿ ಉರುಳಿಸಿ. ಅದನ್ನು ಕಾದ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿದರೆ ಪೋಟ್ಯಾಟೋ ಲಾಲಿಪಾಪ್ ರೆಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read