ಆನೇಕಲ್: ರಾಡ್ ನಿಂದ ಹೊಡೆದು ಅಣ್ಣನ ಇಬ್ಬರು ಮಕ್ಕಳನ್ನೇ ಚಿಕ್ಕಪ್ಪ ಹತ್ಯೆಗೈದಿರುವ ಘಟನೆ ಬೆಂಗಳೂರು ನಗರದ ಆನೇಕಲ್ ತಾಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ.
ಇಶಾಕ್ (9) ಹಾಗೂ ಜುನೇದ್ (7) ಮೃತ ಬಾಲಕರು. ಖಾಸೀಂ ಎಂಬ ದುರುಳ ತನ್ನ ಸ್ವಂತ ಅಣ್ಣನ ಮಕ್ಕಳನ್ನೇ ಹೊಡೆದು ಕೊಂದಿದ್ದಾನೆ.
ಖಾಸಿಂನ ಅಣ್ಣ ಹಾಗೂ ಅತ್ತಿಗೆ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿದ್ದ ತಾಯಿ ತರಕಾರಿ ತರಲೆಂದು ಮಾರ್ಕೆಟ್ ಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ಮೂವರು ಮಕ್ಕಳ ಮೇಲೆ ಖಾಸಿಂ ದಾಳಿ ನಡೆಸಿದ್ದಾನೆ. ರಾಡ್ ಹಾಗೂ ಕಲ್ಲಿನಿಂದ ಹೊಡೆದಿದ್ದಾನೆ. ಸ್ಥಳದಲ್ಲೇ ಇಶಾಕ್ ಹಾಗೂ ಜುನೇಡ್ ಎಂಬ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮತ್ತೋರ್ವ ಬಾಲಕ ಮೊಹಮ್ಮದ್ ರೋಹನ್ (5)ನ ಸ್ಥಿತಿ ಗಂಭೀರವಾಗಿದೆ.
ಹೆಬ್ಬಗೋಡಿ ಠಾಣೆಯ ಕಮ್ಮಸಂದ್ರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.