ಬೆಂಗಳೂರು: ನವಜಾತ ಶಿಶುವನ್ನು ಹಣಕ್ಕಾಗಿ ಮಾರಿದ್ದ ತಾಯಿ ಹಣ ಖರ್ಚಾದ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಡಿಜೆಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನಸಿಂ ಬೇಗಂ ಎಂಬ ಮಹಿಳೆ ತನ್ನ ನವಜಾತ ಶಿಶುವನ್ನು 2.5 ಲಕ್ಷ ಹಣಕ್ಕೆ ಅಮುದಾ, ರಮ್ಯಾ ಎಂಬುವವರಿಗೆ ಮಾರಿದ್ದಾರೆ. ನಸಿಂ ಬೇಗಂ 15 ವರ್ಷಗಳ ಹಿಂದೆ ದಸ್ತಗೀರ್ ಎಂಬುವವರನ್ನು ವಿವಾಹವಾಗಿದ್ದರು. ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶಿವಾಜಿನಗರ ಘೋಷಾ ಆಸ್ಪತ್ರೆಯಲ್ಲಿ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದ ನಸಿಂ ಹಣಕ್ಕಾಗಿ ಮಗುವನ್ನು ಮಾರಿದ್ದಾರೆ.
ಹೀಗೆ ಮಗು ಮಾರಿ ಬಂದಿದ್ದ ಹಣ ಖರ್ಚಾದ ಬಳಿಕ ಮಗು ತನಗೆ ವಾಪಸ್ ಬೇಕು ಎಂದು ಕೇಳಿದ್ದಾರೆ. ಡಿ.ಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.