BIG NEWS : ಮಕ್ಕಳು ಆಸ್ತಿ ಅಲ್ಲ, ಮಗಳ ಮದುವೆಯನ್ನು ಒಪ್ಪಿಕೊಳ್ಳಿ’; ಪೋಷಕರ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್.!

ತಮ್ಮ ಅಪ್ರಾಪ್ತ ಮಗಳನ್ನು ಯುವಕನೊಬ್ಬ ಅಪಹರಿಸಿ ಆಕೆಯನ್ನು ಬಲವಂತದಿಂದ ವಿವಾಹವಾಗಿದ್ದು, ಯುವಕನ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ದಂಪತಿ ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ಮಕ್ಕಳು ನಿಮ್ಮ ಆಸ್ತಿಯಲ್ಲ. ಆಕೆ ಈಗ ವಿವಾಹ ಯೋಗ್ಯ ವಯಸ್ಕಳಾಗಿರುವುದರಿಂದ ಈ ಮದುವೆಯನ್ನು ಒಪ್ಪಿಕೊಳ್ಳಿ ಎಂದು ಪೋಷಕರಿಗೆ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು, ಮದುವೆಯ ಸಮಯದಲ್ಲಿ ಹುಡುಗಿ ಅಪ್ರಾಪ್ತ ವಯಸ್ಕಳಾಗಿರಲಿಲ್ಲ ಮತ್ತು ಆಕೆಯ ಪೋಷಕರು ಮದುವೆಯನ್ನು ಒಪ್ಪಿಕೊಳ್ಳದ ಕಾರಣ ಯುವಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದರಲ್ಲದೇ, ಮಧ್ಯಪ್ರದೇಶ ಹೈಕೋರ್ಟ್‌ ವಿಭಾಗೀಯ ಪೀಠ ಎಫ್‌ಐಆರ್‌ ರದ್ದುಗೊಳಿಸಿದ ಆದೇಶವನ್ನು ಎತ್ತಿ ಹಿಡಿದಿದ್ದಾರೆ.

ವಿವಾಹದ ಸಂದರ್ಭದಲ್ಲಿ ತಮ್ಮ ಪುತ್ರಿ 16 ವರ್ಷದವಳಾಗಿದ್ದಳು ಎಂಬ ದಾಖಲೆಯನ್ನು ಆಕೆಯ ತಂದೆ ನ್ಯಾಯಪೀಠದ ಗಮನಕ್ಕೆ ತರಲು ಮುಂದಾದರಾದರೂ ಆಕೆ ಈಗ ಪ್ರಾಪ್ತ ವಯಸ್ಕಳಾಗಿದ್ದಾಳೆ.ಆಕೆಗೂ ಈ ಮದುವೆ ಸಮ್ಮತಿಯಿದೆ. ಹೀಗಾಗಿ ಈ ಮದುವೆಯನ್ನು ನೀವು ಒಪ್ಪಿಕೊಳ್ಳಿ, ಆತನಿಗೆ ಜೈಲು ಶಿಕ್ಷೆ ಕೊಡಿಸುವ ಹಕ್ಕನ್ನು ನೀವು ಈಗ ಹೊಂದಿಲ್ಲ ಎಂದು ನ್ಯಾಯಪೀಠ ಇದೇ ಸಂದರ್ಭದಲ್ಲಿ ತಿಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read