ಚೆನ್ನೈ: 8 ತಿಂಗಳ ಕಂದಮ್ಮ ಶೀತ, ಕೆಮ್ಮಿನಿಂದ ಬಳಲುತ್ತಿದ್ದ ಕಾರಣ ಮಗುವಿನ ಮೂಗಿಗೆ ವಿಕ್ಸ್ ಹಚ್ಚಿದ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈನ ಅಭಿರಾಂಪುರದಲ್ಲಿ ನಡೆದಿದೆ.
ಕೆಲ ದಿನಗಳಿಂದ ಮಗು ನೆಗಡಿ, ಕೆಮ್ಮಿನಿಂದ ಬಳಲುತ್ತಿತ್ತು. ಮಗುವಿನ ತಂದೆ ದೇವನಾಥನ್ ಹಾಗೂ ತಾಯಿ ಕಂದಮ್ಮನ ಸ್ಥಿತಿ ನೋಡಿ ನೆಗಡಿ ಕಡಿಮೆಯಾಗಲಿ ಎಂದು ಮಗುವಿನ ಮೂಗು, ಗಂಟಲಿಗೆ ವಿಕ್ಸ್ ಹಾಗೂ ಕರ್ಪೂರವನ್ನು ಹಚ್ಚಿದ್ದಾರೆ. ವಿಕ್ಸ್ ಹಾಗೂ ಕರ್ಪೂರವನ್ನು ಹಚ್ಚಿದ ಕೆಲವೇ ಸಮಯದಲ್ಲಿ ಮಗುವಿಗೆ ಉಸಿರಾಡಲು ಇನ್ನಷ್ಟು ಕಷ್ಟವಾಗಿದೆ. ತಕ್ಷಣ ಮಗುವನ್ನು ಎಗ್ಮೋರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಗುವಿಗೆ ಚಿಕಿತ್ಸೆ ನಿದಲಾಯಿತಾದರೂ ಫಲಕಾರಿಯಾಗದೇ ಮಗು ಕೊನೆಯುಸಿರೆಳೆದಿದೆ. 8 ತಿಂಗಳ ಕಂದಮ್ಮ ಶೀತ, ಕೆಮ್ಮಿನಿಂದ ಸಾವನ್ನಪ್ಪಿದೆಯೇ ಅಥವಾ ವಿಕ್ಸ್, ಕರ್ಪೂರ ಹಚ್ಚಿದ್ದರಿಂದ ಸಾವನ್ನಪ್ಪಿದೆಯೇ ಎಂಬುದು ಇನ್ನಷ್ಟೇ ಖಚಿತಪಡಬೇಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.