ರಾಜ್ಯದಲ್ಲಿ ಮಹಾಮಾರಿ ಡೆಂಘೀ ಅಬ್ಬರದ ಹೊತ್ತಲ್ಲೇ ಮತ್ತೊಂದು ಶಾಕ್: ಚಿಕೂನ್ ಗುನ್ಯಾ ಕೇಸ್ ಗಳೂ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಡೆಂಘೀ ಜ್ವರಕ್ಕೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಡೆಂಘೀ ಜ್ವರ ಆತಂಕಕ್ಕೆ ಕಾರಣವಾಗಿರುವ ಹೊತ್ತಲ್ಲೇ ಚಿಕೂನ್ ಗುನ್ಯಾ ಕೇಸ್ ಗಳೂ ಕೂಡ ಹೆಚ್ಚಾಗಿವೆ.

ರಾಜ್ಯದಲ್ಲಿ ಒಟ್ಟು 767 ಚಿಕೂನ್ ಗುನ್ಯಾ ಕೇಸ್ ಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಇಂದು 26 ಚಿಕೂನ್ ಗುನ್ಯಾ ಕೇಸ್ ಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಒಟ್ಟು ಚಿಕೂನ್ ಗುನ್ಯಾ ಕೇಸ್ ಗಳ ಸಂಖ್ಯೆ 176ಕ್ಕೆ ಏರಿದೆ.

ಡೆಂಘೀ ಪ್ರಕರಣಗಳ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗಿದೆ. ಇಂದು 18 ಜನರಿಗೆ ಡೆಂಘೀ ಜ್ವರ ಇರುವುದು ದೃಢಪಟ್ಟಿದೆ. 300 ಜನರ ರಕ್ತದ ಮಾದರಿಯ ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ 18 ಜನರಿಗೆ ಡೆಂಘೀ ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ ಡೆಂಘೀ ಕೇಸ್ ಗಳ ಸಂಖ್ಯೆ 1564ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ 31 ಕೇಸ್ ಪತ್ತೆಯಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read